ಕರ್ನಾಟಕ

karnataka

ETV Bharat / international

Video: ಮೃತದೇಹ ಹೆಲಿಕಾಪ್ಟರ್​ಗೆ ನೇತು ಹಾಕಿ ತಾಲಿಬಾನ್​ ದುಷ್ಕೃತ್ಯ? - ಮೃತದೇಹವನ್ನು ಹೆಲಿಕಾಪ್ಟರ್​ಗೆ ನೇತು ಹಾಕಿದ ತಾಲಿಬಾನ್​

ಕಾಬೂಲ್​ನಿಂದ ಆಫ್ಘನ್ ಸೇನೆ ಹಿಂದಿರುಗಿದ ಕೆಲ ಹೊತಲ್ಲೇ ತಾಲಿಬಾನ್​ ರಣಕೇಕೆ ಹಾಕುತ್ತಿದೆ. ಮೃತದೇಹವೊಂದನ್ನ ಹೆಲಿಕಾಪ್ಟರ್​ಗೆ ಕಟ್ಟಿಕೊಂಡು ಹಾರಾಟ ನಡೆಸಿದೆ ಎನ್ನಲಾಗಿದೆ.

ತಾಲಿಬಾನ್
ತಾಲಿಬಾನ್

By

Published : Aug 31, 2021, 10:54 PM IST

ನವದೆಹಲಿ: ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಹಿಂದಿರುಗುತ್ತಿದ್ದಂತೆಯೇ ತಾಲಿಬಾನಿಗಳ ಅಟ್ಟಹಾಸ ಮಿತಿ ಮೀರಿದೆ. ಅಮೆರಿಕ ಮಿಲಿಟರಿ ಹೆಲಿಕಾಪ್ಟರ್‌ಗೆ ಮೃತದೇಹವನ್ನು ನೇತು ಹಾಕಿ ಕಂದಹಾರ್‌ನಲ್ಲಿ ತಾಲಿಬಾನ್‌ಗಳು ಹಾರಿಸುತ್ತಿದ್ದಾರೆ ಎನ್ನಲಾದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇಂದು ಕೆಲವರು ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ತಾಲಿಬಾನಿಗಳ ದುರ್ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನದಿಂದ ಅಮೆರಿಕದ ಸೇನೆ ಹಿಂದಿರುಗಿದ ಬಳಿಕ ತಾಲಿಬಾನಿಗಳು ಈ ವರ್ತನೆ ತೋರಿದ್ದಾರೆಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕಾಶ್ಮೀರದ ವಿಷಯದಲ್ಲಿ ತಾಲಿಬಾನ್ ಜತೆ ಭಾರತ ಒಪ್ಪಂದ ಮಾಡಿಕೊಳ್ಳುತ್ತದೆಯೇ?

ABOUT THE AUTHOR

...view details