ಕರ್ನಾಟಕ

karnataka

ETV Bharat / international

ಕಪ್ಪು ವರ್ಣೀಯನ ತಲೆಗೆ ಮುಸುಕು ಹಾಕಿದ ಪೊಲೀಸರು: ಉಸಿರುಗಟ್ಟಿ ಸಾವು - ಅಮೆರಿಕದಲ್ಲಿ ಕಪ್ಪು ವ್ಯಕ್ತಿ ಸಾವು

ಪಶ್ಚಿಮ ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಬೆತ್ತಲೆಯಾಗಿ ಓಡಿ ಬಂದ ಒಬ್ಬ ಕಪ್ಪು ವ್ಯಕ್ತಿ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವ ಕಾರಣ ಆತ ಸಾವಿಗೀಡಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಮಾರ್ಚ್​ ತಿಂಗಳಲ್ಲಿ ನಡೆದ ಘಟನೆಗೆ ಈಗ ಪುರಾವೆ ಸಿಕ್ಕಿದೆ.

Video in Black man's suffocation shows cops put hood on him
ಕಪ್ಪು ವರ್ಣೀಯನ ಮೇಲೆ ದೌರ್ಜನ್ಯ

By

Published : Sep 3, 2020, 1:10 PM IST

ನ್ಯೂಯಾರ್ಕ್:ಪಶ್ಚಿಮ ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಬೆತ್ತಲೆಯಾಗಿ ಓಡಿ ಬಂದ ಒಬ್ಬ ಕಪ್ಪು ವರ್ಣೀಯ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಪೊಲೀಸ್ ಅಧಿಕಾರಿಗಳ ಗುಂಪು ಆತನ ತಲೆಗೆ ಮುಸುಕನ್ನು ಹಾಕಿ ಮುಖವನ್ನು ಎರಡು ನಿಮಿಷಗಳ ಕಾಲ ಪಾದಚಾರಿ ಮಾರ್ಗಕ್ಕೆ ಒತ್ತಿದ ವಿಡಿಯೋವನ್ನು ಆತನ ಪೋಷಕರು ಬಿಡುಗಡೆ ಮಾಡಿದ್ದಾರೆ.

ರೋಚೆಸ್ಟರ್‌ನಲ್ಲಿ ಪೊಲೀಸರೊಂದಿಗೆ ಮುಖಾಮುಖಿಯಾದ ಏಳು ದಿನಗಳ ನಂತರ ಡೇನಿಯಲ್ ಪ್ರೂಡ್ ಮಾರ್ಚ್ 30ರಂದು ಸಾವನ್ನಪ್ಪಿದ್ದಾನೆ. ಅವರ ಕುಟುಂಬವು ಸುದ್ದಿಗೋಷ್ಠಿ ನಡೆಸಿ ಪೊಲೀಸ್ ಬಾಡಿ ಕ್ಯಾಮರಾ ವಿಡಿಯೋ ಮತ್ತು ಸಾರ್ವಜನಿಕ ದಾಖಲೆಗಳ ವಿನಂತಿಯ ಮೂಲಕ ಪಡೆದ ಲಿಖಿತ ವರದಿಗಳನ್ನು ಬಿಡುಗಡೆ ಮಾಡುವವರೆಗೂ ಅವರ ಸಾವು ಸಾರ್ವಜನಿಕರ ಗಮನ ಸೆಳೆದಿರಲಿಲ್ಲ.

ಕಪ್ಪು ವರ್ಣೀಯನ ಮೇಲೆ ದೌರ್ಜನ್ಯ

ಬೆತ್ತಲೆಯಾಗಿರುವ ಪ್ರೂಡ್​ನನ್ನು ನೆಲದ ಮೇಲೆ ಕುರುವಂತೆ ಮತ್ತು ಕೈಗಳನ್ನು ಹಿಂದಕ್ಕೆ ಕಟ್ಟುವಂತೆ ಪೊಲೀಸರು ಹೇಳುತ್ತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು. ಕೆಲವು ಕ್ಷಣಗಳು ಕೈಗೆ ಕೋಳ ತೊಡಿಸಿಕೊಂಡು ಪಾದಚಾರಿ ಮಾರ್ಗದಲ್ಲಿ ಕುಳಿತಿದ್ದ ಆತ ಆಕ್ರೋಶಗೊಂಡು ಕೂಗುತ್ತಾನೆ.

ನಂತರ ಅವರು ಅವನ ತಲೆಯ ಮೇಲೆ ಬಿಳಿ “ಸ್ಪಿಟ್ ಹುಡ್”(ಮುಸುಕು) ಹಾಕಿದ್ದಾರೆ. ಬಂಧಿತನು ಅಧಿಕಾರಿಗಳ ಮೇಲೆ ಉಗುಳುವ ಸಾಧ್ಯತೆಯನ್ನು ಕಂಡು ಅಧಿಕಾರಿಗಳನ್ನು ರಕ್ಷಿಸುವ ಉದ್ದೇಶದಿಂದ ಮುಸುಕು ಹಾಕಿದ್ದಾರೆ. ಆ ಸಮಯದಲ್ಲಿ ನ್ಯೂಯಾರ್ಕ್ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳಲ್ಲಿತ್ತು.

ಪ್ರೂಡ್ ಅದನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾನೆ. ನಂತರ ಅಧಿಕಾರಿಯ ಪ್ರೂಡ್‌ನ ತಲೆಯನ್ನು ರಸ್ತೆಗ ಹಾಕಿ ಒತ್ತಿದ್ದಾರೆ. ಪ್ರೂಡ್‌ನ ಕೂಗುಗಳು ಗುಸುಗುಸು ಮತ್ತು ಗೊಣಗಾಟಗಳಿಗೆ ತಿರುಗುತ್ತದೆ. ಇನ್ನೊಬ್ಬ ಅಧಿಕಾರಿ ಬೆನ್ನಿಗೆ ಮೊಣಕಾಲು ಇಡುತ್ತಾನೆ. ಪ್ರುಡ್​ನ ಆಯಿಯಿಂದ ನೀರು ಹೊರ ಬರುವುದನ್ನು ಗಮನಿಸಿದಾಗ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details