ಕರ್ನಾಟಕ

karnataka

ಚೀನಾ ಭಾರತವನ್ನು ಬೆದರಿಸುವತ್ತ ಬಲವಾಗಿ ಮುನ್ನುಗ್ಗುತ್ತಿದೆ: ಡೊನಾಲ್ಡ್​ ಟ್ರಂಪ್​

By

Published : Sep 5, 2020, 6:50 AM IST

ಚೀನಾ ಭಾರತಕ್ಕೆ ಬೆದರಿಕೆಯೊಡ್ಡುತ್ತಿದ್ದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಡೊನಾಲ್ಡ್​ ಟ್ರಂಪ್, ಅದು ನಿಜವಲ್ಲ. ಆದರೆ ಚೀನಾ ಖಂಡಿತವಾಗಿಯೂ ಅದರತ್ತ ಸಾಗುತ್ತಿದೆ. ಬಹಳಷ್ಟು ಜನರು ಅರ್ಥ ಮಾಡಿಕೊಳ್ಳುವುದಕ್ಕಿಂತ ಅವರು ಹೆಚ್ಚು ಬಲವಾಗಿ ಮುನ್ನುಗ್ಗುತ್ತಿದ್ದಾರೆ ಎಂದು ಟ್ರಂಪ್ ಹೇಳಿದರು.

Trump
ಟ್ರಂಪ್

ವಾಷಿಂಗ್ಟನ್: ಭಾರತ-ಚೀನಾ ಗಡಿಯಲ್ಲಿನ ಪರಿಸ್ಥಿತಿ ತುಂಬಾ ಕ್ಷಿಷ್ಟಕರವಾಗಿದೆ. ಚೀನಿಯರು ಹೆಚ್ಚು ಬಲಿಷ್ಠವಾಗಿ ಮುನ್ನುಗುತ್ತಿದ್ದಾರೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದು, ಉಭಯ ರಾಷ್ಟ್ರಗಳ ಮಧ್ಯಸ್ಥಿಕೆ ವಹಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾವು ಚೀನಾ ಬಗ್ಗೆ ಮಾತನಾಡುತ್ತಿದ್ದೇವೆ. ಭಾರತದ ಗಡಿಯಲ್ಲಿನ ಸ್ಥಿತಿ ನಿಮಗೆ ತಿಳಿದಿದೆ. ಇದು ತುಂಬಾ ಅಸಹ್ಯಕರವಾಗಿದೆ ಎಂದರು.

ಚೀನಾ ಮತ್ತು ಭಾರತಕ್ಕೆ ಸಂಬಂಧಿಸಿದಂತೆ ನೆರವಾಗಲು ನಾವು ಸಿದ್ಧರಾಗಿ ನಿಲ್ಲುತ್ತೇವೆ. ನಾವು ಏನನ್ನಾದರೂ ಮಾಡಲು ಸಾಧ್ಯವಾದರೆ ಅದರಲ್ಲಿ ತೊಡಗಿಸಿಕೊಳ್ಳಲು ನಾವು ಇಷ್ಟ ಪಡುತ್ತೇವೆ. ಆ ಬಗ್ಗೆ ಎರಡೂ ದೇಶಗಳೊಂದಿಗೆ ನಾವು ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ.

ಚೀನಾ ಭಾರತಕ್ಕೆ ಬೆದರಿಕೆಯೊಡ್ಡುತ್ತಿದ್ದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ನಿಜವಲ್ಲ. ಆದರೆ ಚೀನಾ ಖಂಡಿತವಾಗಿಯೂ ಅದರತ್ತ ಸಾಗುತ್ತಿದೆ. ಬಹಳಷ್ಟು ಜನರು ಅರ್ಥ ಮಾಡಿಕೊಳ್ಳುವುದಕ್ಕಿಂತ ಅವರು ಹೆಚ್ಚು ಬಲವಾಗಿ ಮುನ್ನುಗ್ಗುತ್ತಿದ್ದಾರೆ ಎಂದು ಟ್ರಂಪ್ ಹೇಳಿದರು.

ABOUT THE AUTHOR

...view details