ಕರ್ನಾಟಕ

karnataka

ETV Bharat / international

ಗ್ಯಾಸೋಲಿನ್ ಪೈಪ್‌ಲೈನ್ ಸ್ಫೋಟ: ಮೂರು ದಿನ ಕಳೆದರೂ ಹೊತ್ತಿ ಉರಿಯುತ್ತಿರುವ ಬೆಂಕಿ! - ವೆನಿಜುವೆಲಾ ಬೆಂಕಿ ಸುದ್ದಿ

ಗ್ಯಾಸೋಲಿನ್ ಪೈಪ್‌ಲೈನ್ ಸ್ಫೋಟದಿಂದಾಗಿ ಸ್ಥಳೀಯರು ಹೆದರಿದ್ದಲ್ಲದೇ, ಮೂರು ದಿನಗಳಿಂದ ಧಗಧಗನೇ ಉರಿಯುತ್ತಿರುವ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಪಡುತ್ತಿರುವ ಘಟನೆ ವೆನಿಜುವೆಲಾ ದೇಶದ ಅಂಜೊಟೆಗುಯಿ ರಾಜ್ಯದಲ್ಲಿ ಕಂಡು ಬಂದಿದೆ.

Venezuela fire crews fight blast fire, Venezuela fire crews fight pipeline blast blaze, gasoline pipeline explosion in venezuela, Venezuela fire news, Venezuela news, ಸ್ಪೋಟದ ಬೆಂಕಿ ನಂದಿಸಲು ವೆನಿಜುವೆಲಾ ಅಗ್ನಿಶಾಮದಳದಿಂದ ಹರಸಾಹಸ,  ವೆನಿಜುವೆಲಾದಲ್ಲಿ ಗ್ಯಾಸೋಲಿನ್ ಪೈಪ್‌ಲೈನ್ ಸ್ಫೋಟ, ವೆನಿಜುವೆಲಾ ಬೆಂಕಿ ಸುದ್ದಿ, ವೆನಿಜುವೆಲಾ ಸುದ್ದಿ
ಮೂರುದಿನ ಕಳೆದ್ರೂ ಹೊತ್ತಿ ಉರಿಯುತ್ತಿರುವ ಬೆಂಕಿ

By

Published : Jan 13, 2022, 7:07 AM IST

ಅಂಜೊಟೆಗುಯಿ:ಅಗ್ನಿಶಾಮಕ ದಳದವರು ಬುಧವಾರ ರಾತ್ರಿ ಗ್ಯಾಸೋಲಿನ್ ಪೈಪ್‌ಲೈನ್ ಸ್ಫೋಟದಿಂದ ಉಂಟಾದ ಬೆಂಕಿ ಬೆಂಕಿ ನಂದಿಸಲು ಹರಸಾಯಸ ಪಡುತ್ತಿದ್ದಾರೆ.

ಬಾರ್ಸಿಲೋನಾ ನಗರದಿಂದ ಮೈಲಿಗಳಷ್ಟು ದೂರದ ಆಕಾಶ ಕಡೆ ಅದ್ಭುತವಾದ ಹೊಳಪು ಕಂಡಿದೆ ಎಂದು ಸ್ಫೋಟದಿಂದ ಉಂಟಾದ ಬೆಂಕಿಯ ಬಗ್ಗೆ ಪ್ರತ್ಯಕ್ಷದರ್ಶಿಗಳ ಹೇಳಿದರು. ಆ ಬೆಂಕಿಯ ಜ್ವಾಲೆಗಳು ತುಂಬಾ ಹೆಚ್ಚಾಗುತ್ತಿತ್ತು ಎಂದು ಜ್ವಾಲೆಯಿಂದ ಓಡಿಹೋದ ಸ್ಥಳೀಯ ನಿವಾಸಿ ಆಂಡ್ರ್ಯೂ ಟೊರೆಸ್ ಹೇಳಿದ್ದಾರೆ.

ಮೂರುದಿನ ಕಳೆದ್ರೂ ಹೊತ್ತಿ ಉರಿಯುತ್ತಿರುವ ಬೆಂಕಿ

ಮಂಗಳವಾರದ ನಡೆದ ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಸೈಮನ್ ಬೊಲಿವಾರ್ ಪುರಸಭೆಯ ನರಿಕ್ಯುಯಲ್ ಸೇತುವೆಯ ಎತ್ತರದಲ್ಲಿರುವ ಇಂಧನ ಪೈಪ್‌ಲೈನ್‌ನಲ್ಲಿ ಬಲವಾದ ಸ್ಫೋಟ ಕಾಣಿಸಿಕೊಂಡಿದೆ ಎಂದು ಅಂಜೊಟೆಗುಯಿ ಗವರ್ನರ್ ಲೂಯಿಸ್ ಜೋಸ್ ಮಾರ್ಕಾನೊ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದಿದ್ದಾರೆ.

ಸರ್ಕಾರಿ ಸ್ವಾಮ್ಯದ PDVSAನ ಪೈಪ್‌ಲೈನ್ ಮೂಲಕ ಗ್ಯಾಸೋಲಿನ್ ಸಾಗಿಸಲಾಗುತ್ತಿದೆ. ಈ ಹಿಂದೆ ಗ್ಯಾಸೋಲಿನ್ ಹೊರತೆಗೆಯಲು ಅಕ್ರಮ ರಂಧ್ರಗಳ ಕೊರೆಯುತ್ತಿದ್ದರು. ಪೈಪ್‌ಲೈನ್‌ಗಳ ಅಕ್ರಮ ಟ್ಯಾಪಿಂಗ್​ಗೆ ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಮಾರ್ಕಾನೊ ಹೇಳಿದರು.

ಸ್ಫೋಟ ಮತ್ತು ನಂತರದ ಬೆಂಕಿಯಿಂದಾಗಿ ಯಾರಾದರೂ ಸತ್ತಿದ್ದಾರೆ ಅಥವಾ ಗಾಯಗೊಂಡಿದ್ದಾರೆಯೇ ಎಂದು ಅಧಿಕಾರಿಗಳು ಇನ್ನೂ ಹೇಳಬೇಕಾಗಿದೆ.

For All Latest Updates

ABOUT THE AUTHOR

...view details