ಕರ್ನಾಟಕ

karnataka

ETV Bharat / international

ಕೊರೊನಾ ಲಸಿಕೆ ಪಡೆದ ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್, ಪತ್ನಿ - ಕೊರೊನಾ ಲಸಿಕೆ ಪಡೆದ ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್, ಪತ್ನಿ

ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ (93) ಮತ್ತು ಅವರ ಪತ್ನಿ ರೊಸಾಲಿನ್ ಕಾರ್ಟರ್ (93) ಅವರು ಜಾರ್ಜಿಯಾದಲ್ಲಿ ಕೋವಿಡ್ ಲಸಿಕೆಯನ್ನು ಪಡೆದರು.

ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್
ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್

By

Published : Feb 25, 2021, 7:30 PM IST

ಪ್ಲೇನ್ಸ್​​:ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಮತ್ತು ಅವರ ಪತ್ನಿ ರೊಸಾಲಿನ್ ಕಾರ್ಟರ್​ಗೆ ಕೋವಿಡ್-19 ಲಸಿಕೆ ಹಾಕಲಾಯಿತು. ಲಸಿಕೆ ಹಾಕಿಸಿಕೊಂಡ ತಕ್ಷಣ ಈ ಜೋಡಿ ಪ್ರಾರ್ಥನೆ ಮಾಡಲು ಚರ್ಚ್‌ಗೆ ತೆರಳಿತು. ಕಳೆದ ಎರಡು ಭಾನುವಾರಗಳಿಂದ ಈ ದಂಪತಿ ಕಾಡಿನಲ್ಲಿದ್ದಾರೆ ಎಂದು ಪಾಸ್ಟರ್ ಟೋನಿ ಲೋಡೆನ್ ವಿಡಿಯೋ ಒಂದಲ್ಲಿ ತಿಳಿಸಿದ್ದಾರೆ.

ಜಿಮ್ಮಿ ಕಾರ್ಟರ್ ಅವರು ಭಾನುವಾರ ಶಾಲಾ ತರಗತಿಯಲ್ಲಿ ಬೋಧಿಸುವುದನ್ನು ಪುನಾರಂಭಿಸಿಲ್ಲ. ಅವರ ಒಂದು ತರಗತಿಗೆ ವರ್ಷದಲ್ಲಿ ಸಾವಿರಾರು ಜನರು ಬರುತ್ತಿದ್ದರು. ವಿಡಿಯೋದಲ್ಲಿ ಲೋಡೆನ್​​ ಈ ದಂಪತಿ ಕೋವಿಡ್​ನಿಂದ ಬಚಾವ್​ ಆಗಲು ಸುರಕ್ಷಿತ ಪ್ರದೇಶದಲ್ಲಿದ್ದಾರೆ. ಅಲ್ಲದೇ ಇಲ್ಲೂ ಸಾಮಾಜಿಕ ಅಂತರವನ್ನು ಪಾಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಓದಿ:ಪಿಎನ್​ಬಿಗೆ 13,500 ಕೋಟಿ ರೂ ವಂಚನೆ... ನೀರವ್ ಮೋದಿ ಭಾರತಕ್ಕೆ ಹಸ್ತಾಂತರ ಮಾಡಲು ಆದೇಶ

ಮಾಸ್ಕ್​, ತಾಪಮಾನ ತಪಾಸಣೆ, ಸಾಮಾಜಿಕ ಅಂತರ ಎಲ್ಲ ಸೇರಿದಂತೆ ಕಾರ್ಟರ್​ ಚರ್ಚ್​ನಲ್ಲಿಯೂ ಕೊರೊನಾ ನಿಯಮಗಳನ್ನು ಪಾಲನೆ ಮಾಡಿದ್ದಾರೆ. ಚರ್ಚ್​ನಲ್ಲಿ ಪ್ರಾರ್ಥನೆ ಮುಗಿದ ಬಳಿಕ ಅಲ್ಲಿ ನೆರೆದಿದ್ದವರು ಅವರ ಬಳಿ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು. ಕಾರ್ಟರ್​ ಕಳೆದ ಜುಲೈನಲ್ಲಿ ತಮ್ಮ 74ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.

-

ABOUT THE AUTHOR

...view details