ಕರ್ನಾಟಕ

karnataka

ETV Bharat / international

'ನಾಗರಿಕರನ್ನು ರಕ್ಷಿಸಿ..'ಅಮೆರಿಕ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಒತ್ತಾಯ - ನಾಗರೀಕರನ್ನು ರಕ್ಷಿಸಿ ಎಂದ ಯುಎಸ್​ಸಿಐಆರ್​ಎಫ್

ಅಮೆರಿಕ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ದೆಹಲಿ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿ ನಾಗರಿಕರ ಸುರಕ್ಷತೆಗಾಗಿ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

USCIRF condemns violence in New Delhi,ನಾಗರೀಕರನ್ನು ರಕ್ಷಿಸಿ ಎಂದ ಯುಎಸ್​ಸಿಐಆರ್​ಎಫ್
ನಾಗರೀಕರನ್ನು ರಕ್ಷಿಸಿ ಎಂದ ಯುಎಸ್​ಸಿಐಆರ್​ಎಫ್

By

Published : Feb 27, 2020, 1:55 PM IST

ವಾಷಿಂಗ್ಟನ್:ನವದೆಹಲಿ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗ, ನಾಗರಿಕರ ಸುರಕ್ಷತೆಗಾಗಿ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಭಾರತ ಸರ್ಕಾರವನ್ನು ಒತ್ತಾಯಿಸಿದೆ.

ಘಟನಾವಳಿಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿರುವ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎಸ್​ಸಿಐಆರ್​ಎಫ್), 'ನಾಗರಿಕರನ್ನು ಹಿಂಸಾಚಾರದಿಂದ ರಕ್ಷಿಸಲು ಗಂಭೀರ ಪ್ರಯತ್ನಗಳನ್ನು ಮಾಡಬೇಕೆಂದು ನಾವು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇವೆ' ಎಂದು ಯುಎಸ್​ಸಿಐಆರ್​ಎಫ್ ಮುಖ್ಯಸ್ಥ ಟೋನಿ ಪರ್ಕಿನ್ಸ್ ತಿಳಿಸಿದ್ದಾರೆ.

'ದೆಹಲಿಯಲ್ಲಿ ನಾವು ನಡೆಯುತ್ತಿರುವ ಹಿಂಸಾಚಾರ ಪ್ರಕರಣಗಳು ಬಹಳ ಗೊಂದಲ ಉಂಟುಮಾಡುತ್ತಿವೆ. ಯಾವುದೇ ಜವಾಬ್ದಾರಿಯುತ ಸರ್ಕಾರದ ಅತ್ಯಗತ್ಯ ಕರ್ತವ್ಯವೆಂದರೆ ನಾಗರಿಕರಿಗೆ ರಕ್ಷಣೆ ಮತ್ತು ದೈಹಿಕ ಭದ್ರತೆಯನ್ನು ಒದಗಿಸುವುದು' ಎಂದು ಅವರು ಹೇಳಿದ್ದಾರೆ.

ಯುಎಸ್​ಸಿಐಆರ್​ಎಫ್ ಆಯುಕ್ತೆ ಅನುರಿಮಾ ಭಾರ್ಗವ ಕೂಡ ದೆಹಲಿಯಾದ್ಯಂತ ಹಿಂಸಾಚಾರ ಮುಂದುವರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 'ಭಾರತ ಸರ್ಕಾರವು ತನ್ನ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತ್ವರಿತ ಕ್ರಮ ತೆಗೆದುಕೊಳ್ಳಬೇಕು'. 'ದೆಹಲಿ ಪೊಲೀಸರು ಜನರ ನಡುವಿನ ಹಿಂಸಾತ್ಮಕ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಯಶ ಕಂಡಿಲ್ಲ. ಸರ್ಕಾರ ತನ್ನ ಕರ್ತವ್ಯದಲ್ಲಿ ವಿಫಲವಾಗುತ್ತಿದೆ ಎಂಬ ವರದಿಗಳು ಹೆಚ್ಚುತ್ತಿವೆ' ಎಂದಿದ್ದಾರೆ.

For All Latest Updates

ABOUT THE AUTHOR

...view details