ವಾಶಿಂಗ್ಟನ್ :ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದದ ವಿಚಾರದಲ್ಲಿ ಅಮೆರಿಕ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, 'ಟ್ರೀಟಿ ಆಫ್ ಓಪನ್ ಸ್ಕೈಸ್'ನಿಂದ ಹೊರ ಬರುವುದಾಗಿ ಅಧಿಕೃತವಾಗಿ ಘೋಷಿಸಿದೆ.
ಆರು ತಿಂಗಳ ಹಿಂದೆಯೇ ನಾವು ಒಪ್ಪಂದಿಂದ ಹಿಂದೆ ಸರಿಯುವ ಕುರಿತು ಸೂಚನೆಯನ್ನು ನೀಡಿದ್ದೆವು. ರಷ್ಯಾವು ಹಲವು ವರ್ಷಗಳಿಂದ ಒಪ್ಪಂದವನ್ನು ಉಲ್ಲಂಘಿಸುತ್ತಿದೆ. ಆದ್ದರಿಂದ ನಾವು ಒಪ್ಪಂದ ಭಾಗವಾಗಲು ಇಚ್ಚಿಸುವುದಿಲ್ಲ ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ'ಬ್ರೇನ್ ಅವರನ್ನು ಉಲ್ಲೇಖಿಸಿ ಕಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.