ಕರ್ನಾಟಕ

karnataka

ETV Bharat / international

ಪೂರ್ವ ಲಡಾಖ್​ನಲ್ಲಿ ಶಾಂತಿ ಕಾಪಾಡುವ ಭಾರತ - ಚೀನಾ ಪ್ರಯತ್ನವನ್ನ ಸ್ವಾಗತಿಸಿದ ದೊಡ್ಡಣ್ಣ

ಭಾರತ ಮತ್ತು ಚೀನಾ ಶಾಂತಿಯುತ ನಿರ್ಣಯದತ್ತ ಹೆಜ್ಜೆ ಹಾಕುತ್ತಿರುವುದರಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವ ನಮ್ಮ ಕೆಲಸವನ್ನು ಮುಂದುವರೆಸುವುದಾಗಿ ಅಮೆರಿಕ ತಿಳಿಸಿದೆ.

US welcomes efforts by India and China to de-escalate situation in eastern Ladakh
ಪೂರ್ವ ಲಡಾಖ್​ನಲ್ಲಿ ಶಾಂತಿ ಕಾಪಾಡುವ ಭಾರತ-ಚೀನಾ ಪ್ರಯತ್ನವನ್ನ ಸ್ವಾಗತಿಸಿದ ದೊಡ್ಡಣ್ಣ

By

Published : Feb 12, 2021, 1:05 PM IST

ವಾಷಿಂಗ್ಟನ್: ಪೂರ್ವ ಲಡಾಖ್​ನಲ್ಲಿ ಉಲ್ಬಣವಾಗಿರುವ ಪರಿಸ್ಥಿತಿಯನ್ನು ನಿಯಂತ್ರಿಸಲು ಭಾರತ ಮತ್ತು ಚೀನಾ ನಡೆಸುತ್ತಿರುವ ಪ್ರಯತ್ನಗಳನ್ನು ಅಮೆರಿಕ ಸ್ವಾಗತಿಸಿದೆ.

ಪ್ಯಾಂಗಾಂಗ್​ ಸರೋವರದ ಉತ್ತರ ಮತ್ತು ದಕ್ಷಿಣ ತೀರದಿಂದ ಭಾರತ ಮತ್ತು ಚೀನಾ ಸೇನೆಗಳು ಹಿಂದೆ ಸರಿಯುವ ಒಪ್ಪಂದ ಮಾಡಿಕೊಂಡಿರುವುದಾಗಿ ನಿನ್ನೆ ಸಂಸತ್ತಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು.

ಈ ನಿರ್ಧಾರವನ್ನು ಸ್ವಾಗತಿಸಿರುವ ಅಮೆರಿಕ ರಾಜ್ಯ ಇಲಾಖೆಯ ವಕ್ತಾರ, ಎರಡೂ ರಾಷ್ಟ್ರಗಳು ಶಾಂತಿಯುತ ನಿರ್ಣಯದತ್ತ ಹೆಜ್ಜೆ ಹಾಕುತ್ತಿರುವುದರಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವ ನಮ್ಮ ಕೆಲಸವನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಚೀನಾ- ಭಾರತ ಗಡಿ ಘರ್ಷಣೆಗೆ ಅಂತ್ಯ ಹಾಡುವ ಕಾಲ ಸಮೀಪಿಸಿದೆ: ರಾಜನಾಥ್ ಸಿಂಗ್ ವಿಶ್ವಾಸ

ಅಮೆರಿಕ ಕಾಂಗ್ರೆಸ್​ನ ಸದಸ್ಯ ಹಾಗೂ ರಿಪಬ್ಲಿಕನ್ ಪಕ್ಷದ ಮುಖಂಡರಾಗಿರುವ ಮೈಕೆಲ್ ಮೆಕ್ಕಾಲ್ ಕೂಡ ಸೇನೆಗಳು ಹಿಂದೆ ಸರಿಯುತ್ತಿರುವುದನ್ನು ಶ್ಲಾಘಿಸಿದ್ದು, "ಭಾರತವು ತನ್ನ ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ದೃಢವಾಗಿ ನಿಂತಿರುವುದು ಉತ್ತಮವಾಗಿದೆ" ಎಂದು ಟ್ವೀಟ್​ ಮಾಡಿದ್ದಾರೆ.

ABOUT THE AUTHOR

...view details