ಕರ್ನಾಟಕ

karnataka

ETV Bharat / international

ಇರಾನ್‌ ಸೈಬರ್​ ದಾಳಿ ಎದುರಿಸಲು ಸಿದ್ಧರಾಗಿ: ದೇಶವಾಸಿಗಳಿಗೆ ಅಮೆರಿಕ ಎಚ್ಚರಿಕೆ - ಅಮೆರಿಕ ಇರಾನ್ ಸೈಬರ್ ದಾಳಿ ಎಚ್ಚರಿಕೆ

ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಮಾತನಾಡಿರುವ ಇರಾನ್ ದೇಶ ಸೈಬರ್ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ತನ್ನ ದೇಶದ ಜನತೆಗೆ ಎಚ್ಚರಿಕೆ ನೀಡಿದೆ.

US warns of potential cyberattacks,ಇರಾನ್ ನಿಂದ ಸೈಬರ್​ ದಾಳಿ ಸಾಧ್ಯತೆ
ಇರಾನ್ ನಿಂದ ಸೈಬರ್​ ದಾಳಿ ಸಾಧ್ಯತೆ

By

Published : Jan 5, 2020, 3:12 PM IST

ವಾಷಿಂಗ್ಟನ್:ಇರಾನ್ ಕದ್ಸ್‌ ಫೋರ್ಸ್ ಮುಖ್ಯಸ್ಥ ಜನರಲ್‌ ಕಾಸಿಮ್‌ ಸುಲೇಮಾನಿ ಹತ್ಯೆ ನಂತರ ಅಮೆರಿಕ ಮತ್ತು ಇರಾನ್ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ನಡುವೆ ಅಮೆರಿಕ ಅಲ್ಲಿನ ಜನರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಭಯೋತ್ಪಾದನೆಯ ಬೆದರಿಕೆಗಳಿಗೆ ಸಂಬಂಧಿಸಿದಂತೆ ಯುಎಸ್ ಹೋಮ್​ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಅಮೆರಿಕದ ವಿರುದ್ಧ ಇರಾನ್ ಪ್ರತೀಕಾರ ತೀರಿಸಿಕೊಳ್ಳಲು ಉದ್ದೇಶಿಸಿದೆ. ಇರಾನ್ ಶಕ್ತಿಯುತವಾದ ಸೈಬರ್ ಪ್ರೋಗ್ರಾಂ ನಿರ್ವಹಿಸುತ್ತಿದೆ ಮತ್ತು ಅಮೆರಿಕ ವಿರುದ್ಧ ಸೈಬರ್ ದಾಳಿಗಳನ್ನು ನಡೆಸಬಹುದು ಮುನ್ನೆಚ್ಚರಿಕೆ ಕೊಟ್ಟಿದೆ.

ಅನುಮಾನಾಸ್ಪದ ಇ-ಮೇಲ್‌ಗಳು ಮತ್ತು ನೆಟ್‌ವರ್ಕ್ ವಿಳಂಬಗಳಂತಹ ಸನ್ನಿವೇಶವನ್ನು ಎದುರಿಸಲು ಅಮೆರಿಕನ್ನರು ಸಿದ್ಧರಾಗಿರಬೇಕು ಎಂದು ತಿಳಿಸಿದೆ. ಜೊತೆಗೆ ವಾಷಿಂಗ್ಟನ್, ನ್ಯೂಯಾರ್ಕ್​, ಚಿಕಾಗೋ, ಫಿಲಿಡೆಲ್ಫಿಯಾ ಸೇರಿದಂತೆ ಇತರೆ ನಗರಗಳಲ್ಲಿ ಇಂಥ ಘಟನೆಗಳು ನಡೆದರೆ ಸಮರ್ಥವಾಗಿ ಎದುರಿಸಲು ಸಿದ್ಧತೆ ನಡೆಯುತ್ತಿದೆ.

ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕನ್ನರು ಅಥವಾ ಅಮೆರಿಕದ ಸ್ವತ್ತುಗಳನ್ನು ಇರಾನ್ ನಾಶ ಪಡಿಸಲು ಹೊರಟರೆ, ನಾವೂ ಕೂಡ ಇರಾನ್​ನ 52 ಸ್ಥಳಗಳೆಡೆಗೆ ಗುರಿ ಇಟ್ಟಿದ್ದೇವೆ (ಹಲವು ವರ್ಷಗಳ ಹಿಂದೆ ಇರಾನ್ ತೆಗೆದುಕೊಂಡ 52 ಅಮೆರಿಕನ್ ಒತ್ತೆಯಾಳುಗಳನ್ನು ಪ್ರತಿನಿಧಿಸುತ್ತವೆ) ಈ 52 ರಲ್ಲಿ ಕೆಲವು ಉನ್ನತ ಮಟ್ಟದ ಸ್ಥಳಗಳಾಗಿದ್ದು, ಇರಾನ್ ಮತ್ತು ಇರಾನಿನ ಸಂಸ್ಕೃತಿಗೆ ಮುಖ್ಯವಾದ ಸ್ಥಳಗಳ ಮೇಲೆ ನಾವು ದಾಳಿ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ABOUT THE AUTHOR

...view details