ಕರ್ನಾಟಕ

karnataka

ETV Bharat / international

ಕ್ಯಾಪಿಟಲ್ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

ಯುಎಸ್​​ ಕಾಪಿಟಲ್​ ಕಾಂಪ್ಲೆಕ್ಸ್ ಬಳಿ ವ್ಯಕ್ತಿಯೋರ್ವ ಬ್ಯಾರಿಕೇಡ್​ ಮುರಿದುಕೊಂಡು ಕಾರು ನುಗ್ಗಿಸಿದ ಪರಿಣಾಮ ಓರ್ವ ಪೊಲೀಸ್​ ಅಧಿಕಾರಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದಾರೆ. ಬಳಿಕ ನಡೆದ ಗುಂಡಿನ ದಾಳಿಯಲ್ಲಿ ವ್ಯಕ್ತಿ ಮೃತಪಟ್ಟಿದ್ದಾನೆ. ಈ ಸಂಬಂಧ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕ್ಯಾಪಿಟಲ್ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

US Vice President Kamala Harris expresses gratitude towards Capitol Police
ಕ್ಯಾಪಿಟಲ್ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

By

Published : Apr 3, 2021, 7:12 AM IST

ವಾಷಿಂಗ್ಟನ್​: ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕ್ಯಾಪಿಟಲ್ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಯುಎಸ್ ಕ್ಯಾಪಿಟಲ್​ನಲ್ಲಿ ಶುಕ್ರವಾರ ನಡೆದ ದಾಳಿಯಲ್ಲಿ ಕೊಲ್ಲಲ್ಪಟ್ಟ ಪೊಲೀಸ್ ಅಧಿಕಾರಿಯ ಕುಟುಂಬ ಮತ್ತು ಸ್ನೇಹಿತರಿಗೆ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಇಬ್ಬರೂ ಸಂತಾಪ ಸೂಚಿಸಿದ್ದಾರೆ.

ಇಂಡಿಯಾನಾದ 25 ವರ್ಷದ ನೋವಾ ಗ್ರೀನ್ ಯುಎಸ್​​ ಕಾಪಿಟಲ್​ ಕಾಂಪ್ಲೆಕ್ಸ್ ಬಳಿ ವ್ಯಕ್ತಿಯೊಬ್ಬ ಬ್ಯಾರಿಕೇಡ್​ ಮುರಿದುಕೊಂಡು ಕಾರು ನುಗ್ಗಿಸಿದ ಪರಿಣಾಮ ಕ್ಯಾಪಿಟಲ್ ಪೊಲೀಸ್ ಅಧಿಕಾರಿ ವಿಲಿಯಂ "ಬಿಲ್ಲಿ" ಇವಾನ್ಸ್ ಸಾವನ್ನಪ್ಪಿದ್ದರು, ಇಬ್ಬರು ಗಾಯಗೊಂಡಿದ್ದರು. ಬಳಿಕ ನಡೆದ ಗುಂಡಿನ ದಾಳಿಯಲ್ಲಿ ನೋವಾ ಗ್ರೀನ್ ಮೃತಪಟ್ಟಿದ್ದಾನೆ.

ಇದನ್ನೂ ಓದಿ:ಯುಎಸ್​​ ಕಾಪಿಟಲ್​ ಕಾಂಪ್ಲೆಕ್ಸ್​ನತ್ತ ಕಾರು ನುಗ್ಗಿಸಿದ ವ್ಯಕ್ತಿ ಹತ್ಯೆ: ಘಟನೆಯಲ್ಲಿ ಪೊಲೀಸ್​ ಸಾವು

ಶುಕ್ರವಾರ ಕಾರು ಚಾಲಕನು ಇಬ್ಬರು ಪೊಲೀಸ್​ ಅಧಿಕಾರಿಗಳನ್ನು ಗುರಿಯಾಗಿಸಿ ಬ್ಯಾರಿಕೇಡ್​ ಮುರಿದುಕೊಂಡು ಯುಎಸ್​​ ಕಾಪಿಟಲ್​ ಕಾಂಪ್ಲೆಕ್ಸ್​ನತ್ತ ವೇಗವಾಗಿ ಚಲಾಯಿಸಿದ್ದಾನೆ. ಈ ವೇಳೆ ಅಧಿಕಾರಿಗಳ ಮಾತು ಕೇಳದ ವ್ಯಕ್ತಿಯ ಮೇಲೆ ಗುಂಡು ಹಾರಿಸಲಾಗಿದ್ದು, ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details