ಕರ್ನಾಟಕ

karnataka

ETV Bharat / international

ಹಾಂಗ್ ​​ಕಾಂಗ್ ಭದ್ರತಾ ಕಾನೂನಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಯುಎಸ್ ಮತ್ತು ಯುಕೆ - ಹಾಂಗ್ ಕಾಂಗ್ ಭದ್ರತಾ ಕಾನೂನಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಯುಎಸ್ ಮತ್ತು ಯುಕೆ

ಹಾಂಗ್ ಕಾಂಗ್‌ನಲ್ಲಿ ಹೊಸ ರಾಷ್ಟ್ರೀಯ ಭದ್ರತಾ ಕಾನೂನು ಹೇರುವ ಪ್ರಸ್ತಾಪವನ್ನು ಚೀನಾದ ಸಂಸತ್ತು ಅಂಗೀಕರಿಸಿದ್ದು, ಈ ಕುರಿತು ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ಕಳವಳ ವ್ಯಕ್ತಪಡಿಸಿವೆ.

un
un

By

Published : May 30, 2020, 1:22 PM IST

ನ್ಯೂಯಾರ್ಕ್ (ಯು.ಎಸ್): ಹಾಂಗ್ ಕಾಂಗ್‌ನಲ್ಲಿ ಹೊಸ ಭದ್ರತಾ ಕಾನೂನು ಹೇರುವ ಚೀನಾದ ಯೋಜನೆಗಳ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ಸೆಕ್ಯುರಿಟಿ ಕೌನ್ಸಿಲ್​ನಲ್ಲಿ (ಯುಎನ್‌ಎಸ್‌ಸಿ) ಕಳವಳ ವ್ಯಕ್ತಪಡಿಸಲಾಗಿದೆ.

ಮುಕ್ತ ಮಂಡಳಿ ಸಭೆಗಾಗಿ ಯುಎಸ್ ಕರೆ ನೀಡಿದ್ದನ್ನು ಚೀನಾ ವಿರೋಧಿಸಿದ ಬಳಿಕ 15 ಸದಸ್ಯರ ಮಂಡಳಿಯ ಸಭೆ ನಡೆಸಿ ಹಾಂಗ್ ಕಾಂಗ್ ಬಗ್ಗೆ ಚರ್ಚಿಸಲಾಗಿದೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

"ಲಕ್ಷಾಂತರ ಹಾಂಗ್ ಕಾಂಗ್ ನಾಗರಿಕರ ಮಾನವ ಹಕ್ಕುಗಳು ಮತ್ತು ಅವರ ಗೌರವಾನ್ವಿತ ಜೀವನ ವಿಧಾನವನ್ನು ರಕ್ಷಿಸಲು ನಾವು ನಿಲುವು ತೆಗೆದುಕೊಳ್ಳಲಿದ್ದೇವೆ" ಎಂದು ಯುಎನ್‌ನ ಯುಎಸ್ ರಾಯಭಾರಿ ಕೆಲ್ಲಿ ಕ್ರಾಫ್ಟ್ ಹೇಳಿದ್ದಾರೆ.

ABOUT THE AUTHOR

...view details