ಕರ್ನಾಟಕ

karnataka

ETV Bharat / international

ಇರಾನ್​ಗೆ ಭಯಪಟ್ಟಿತಾ ಅಮೆರಿಕ?: ಮಧ್ಯಪ್ರಾಚ್ಯದಿಂದ ಸೇನೆ ಹಿಂಪಡೆತಕ್ಕೆ ಸಿದ್ಧತೆ - ಅಮೆರಿಕ ಮತ್ತು ಇರಾಕ್ ಸಂಬಂಧ

ಸೇನಾ ನಾಯಕ ಖಾಸಿಂ ಸೊಲೆಮನಿಯನ್ನು ಏರ್​ಸ್ಟ್ರೈಕ್​ನಲ್ಲಿ ಕೊಂದ ಬಳಿಕ ಅಮೆರಿಕದ ವಿರುದ್ಧ ಇರಾನ್ ಸೇಡು ತೀರಿಸಿಕೊಳ್ಳುವ ಸಾಧ್ಯತೆಯಿದೆ. ಈ ಎಲ್ಲಾ ಸಾಧ್ಯತೆಗಳ ಹಿನ್ನೆಲೆಯಲ್ಲಿ ಸೇನೆ ಹಿಂಪಡೆತ ಅಮೆರಿಕಾಗೆ ಅನಿವಾರ್ಯ ಎನ್ನಲಾಗಿದೆ

america troops
ಅಮೆರಿಕ ಸೇನೆ

By

Published : Dec 8, 2020, 4:42 PM IST

ವಾಷಿಂಗ್ಟನ್ (ಅಮೆರಿಕ): ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಸೇನೆಯನ್ನು ವಾಪಸ್​ ಕರೆಸಿಕೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆ ನೀಡಿದ್ದು, ಮುಂದಿನ ವಾರಗಳಲ್ಲಿ ಸೇನೆ ಅಮೆರಿಕಾಗೆ ಮರಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇರಾಕ್ ಮತ್ತು ಮುಂತಾದ ರಾಷ್ಟ್ರಗಳಲ್ಲಿ ಅಮೆರಿಕ ಸೇನೆಯನ್ನು ನಿಯೋಜಿಸಿದ್ದು, ಇರಾನ್ ಮತ್ತು ಇತರ ರಾಷ್ಟ್ರಗಳ ಸಂಭಾವ್ಯ ದಾಳಿಯನ್ನು ತಪ್ಪಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ಇರಾನ್​ನ ವಿಜ್ಞಾನಿ ಹತ್ಯೆಯಲ್ಲಿ ನಮ್ಮ ಪಾತ್ರವಿಲ್ಲ: ಸೌದಿ ಅರೇಬಿಯಾ ವಿದೇಶಾಂಗ ಸಚಿವ ಸ್ಪಷ್ಟನೆ

ಇದರ ಜೊತೆಗೆ ದಾಳಿಗಳನ್ನು ತಪ್ಪಿಸಲು ಕೂಡಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇನ್ನೂ ಬೇರೆ ಬೇರೆ ಮಾರ್ಗಗಳಿಗಾಗಿ ಅಮೆರಿಕದ ಸೇನಾ ತಜ್ಞರು ಚಿಂತನೆ ನಡೆಸುತ್ತಿದ್ದಾರೆ. ಮಧ್ಯ ಪ್ರಾಚ್ಯ ರಾಷ್ಟ್ರಗಳ ಭದ್ರತಾ ಪರಿಸ್ಥಿತಿಯನ್ನು ಕೂಲಂಕಶವಾಗಿ ಅಧ್ಯಯನ ಮಾಡಲಾಗುತ್ತಿದೆ.

ಸೇನೆಯನ್ನು ಹಿಂದೆಗೆದುಕೊಂಡರೂ ಕೂಡಾ ಅಲ್ಲಿನ ಏರ್​​ಕ್ರಾಫ್ಟ್​ ಕ್ಯಾರಿಯರ್​ ನಿಮಿಟ್ಜ್ ಅನ್ನು 'ಸ್ವಲ್ಪ ದಿನಗಳವರೆಗೆ ಅಲ್ಲಿಯೇ ಉಳಿಯುವಂತೆ' ಅಥವಾ 'ಸ್ವಲ್ಪ ದಿನಗಳ ನಂತರ ವಾಪಸ್​ ಆಗುವಂತೆ 'ಸೂಚಿಸಲಾಗಿತ್ತು. ಇನ್ನೂ ಹೆಚ್ಚಿನ ಅಗತ್ಯವಿದ್ದರೆ ಫೈಟರ್​ ಜೆಟ್​ ಸ್ಕ್ವಾಡ್ರನ್ ಅನ್ನು ಈ ಪ್ರದೇಶಕ್ಕೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದರು.

ಈಗ ನಿಮಿಟ್ಜ್ ಅನ್ನು ಕೂಡಾ ವಾಪಸ್ ಆಗುವಂತೆ ಸೂಚನೆ ನೀಡಲಾಗಿದೆ. ಗಲ್ಫ್ ಪ್ರದೇಶದಿಂದ ಅಮೆರಿಕದತ್ತ ಹೊರಡಲು ನಿಮಿಟ್ಜ್ ಸಿದ್ಧವಾಗಿದೆ. ಆದರೂ ಯಾವ ವೇಳೆಗೆ ಅಮೆರಿಕ ಸೇನೆ ವಾಪಸ್​ ಆಗಲಿದೆ ಎಂಬುದು ಇನ್ನೂ ನಿಖರವಾಗಿ ಹೇಳಲು ಸಾಧ್ಯವಿಲ್ಲ, ಅದಕ್ಕೆ ಟೈಮ್​ಲೈನ್ ಕೂಡಾ ನೀಡಿಲ್ಲ ಎಂದು ಅಮೆರಿಕ ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಟೆಹ್ರಾನ್​: 'ಫಾದರ್ ಆಫ್ ಇರಾನಿಯನ್ ಬಾಂಬ್' ಮೊಹ್ಸೆನ್ ಫಕ್ರಿಜಾಡೆ ಹತ್ಯೆ

ಇರಾಕ್​​ ಮೇಲೆ ಇತ್ತೀಚಿನ ದಿನಗಳಲ್ಲಿ ದಾಳಿಗಳು ಹೆಚ್ಚಾಗುತ್ತಿವೆ. ಜಾಗತಿಕವಾಗಿ ಇರಾನ್ ಸಾಕಷ್ಟು ರೀತಿಯ ತೊಂದರೆಗಳನ್ನು ಎದುರಿಸುತ್ತಿದೆ. ಇರಾನ್​ನ ಅಣು ವಿಜ್ಞಾನಿ ಮೊಹ್ಸೆನ್ ಫಕ್ರಿಝಾದೆ ಹತ್ಯೆಯ ಬಳಿಕ ಇಸ್ರೇಲ್ ಮೇಲೆ ಇರಾನ್ ಕಿಡಿಕಾರುತ್ತಿದೆ.

ಇರಾನ್​ನ ಸೇನಾ ನಾಯಕ ಖಾಸಿಂ ಸೊಲೆಮನಿಯನ್ನು ಏರ್​ಸ್ಟ್ರೈಕ್​ನಲ್ಲಿ ಕೊಂದ ಬಳಿಕ ಅಮೆರಿಕದ ವಿರುದ್ಧವೂ ಕೂಡಾ ಇರಾನ್ ಸೇಡು ತೀರಿಸಿಕೊಳ್ಳುವ ಸಾಧ್ಯತೆಯಿದೆ. ಈ ಎಲ್ಲಾ ಸಾಧ್ಯತೆಗಳ ಹಿನ್ನೆಲೆಯಲ್ಲಿ ಸೇನೆ ಹಿಂಪಡೆತ ಅಮೆರಿಕಾಗೆ ಅನಿವಾರ್ಯ ಎನ್ನಲಾಗಿದೆ. ಇದರೊಂದಿಗೆ ಆಫ್ಘಾನಿಸ್ತಾನದಿಂದಲೂ ಕೂಡಾ ತನ್ನ ಸೇನೆಯನ್ನು ಹಿಂಪಡೆಯುವ ಕಾರ್ಯ ಮುಂದುವರೆಯುತ್ತಿದೆ.

ABOUT THE AUTHOR

...view details