ವಾಷಿಂಗ್ಟನ್:ತಾಲಿಬಾನ್ ಜತೆ ಅಮೆರಿಕ ಶಾಂತಿ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಲ್ಲಿರುವ ತನ್ನ ಸೈನ್ಯವನ್ನು ವಾಪಸ್ ಕರೆಸಲು ಚಿಂತನೆ ನಡೆಸಿದ್ದೇವೆ ಎಂದು ಯುಎಸ್ನ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಟರ್ ಹೇಳಿದ್ದಾರೆ.
ಡ್ರಾಡೌನ್ ಪ್ರಾರಂಭವಾಗಿದೆಯೇ ಎಂದು ಖಚಿತವಾಗಿಲ್ಲ. ಆದರೆ, ತಾಲಿಬಾನ್ ಜೊತೆಗಿನ ಶಾಂತಿ ಒಪ್ಪಂದಕ್ಕೆ ಶನಿವಾರ ಸಹಿ ಹಾಕಿದ 10 ದಿನಗಳಲ್ಲಿ ಅದನ್ನು ಪ್ರಾರಂಭಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಅಫ್ಘಾನಿಸ್ತಾನದಲ್ಲಿ 13 ಸಾವಿರ ಅಮೆರಿಕನ್ ಸೈನಿಕರಿದ್ದು, ಅದರಲ್ಲಿ 8,600 ಸೈನಿಕರನ್ನ ವಾಪಸ್ ಕರೆಯಿಸಿಕೊಳ್ಳಲಿದ್ದೇವೆ ಕಾಬೂಲ್ನಲ್ಲಿರುವ ಯುಎಸ್ ಕಮಾಂಡರ್ ಜನರಲ್ ಸ್ಕಾಟ್ ಮಿಲ್ಲರ್ ಮಾಹಿತಿ ನೀಡಿದ್ದಾರೆ.
ಯುಎಸ್ ಮತ್ತು ತಾಲಿಬಾನ್ ನಡುವೆ ಶಾಂತಿ ಒಪ್ಪಂದವಾದ ಕಾರಣ ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ನಿಲ್ಲಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಮಾರ್ಕ್ ಮಿಲ್ಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾಲಿಬಾನ್ ಸೇರಿದಂತೆ ಅಫ್ಘಾನ್ ನಡುವೆ ಮಾರ್ಚ್ 10 ರೊಳಗೆ ಶಾಂತಿ ಮಾತುಕತೆ ನಡೆಯಲಿದೆ ಎಂದು ಯುಎಸ್ ನಿರೀಕ್ಷಿಸುತ್ತದೆ ಎಂದು ಎಸ್ಪರ್ ಹೇಳಿದ್ದಾರೆ.