ವಾಷಿಂಗ್ಟನ್: ಯುಎಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ಸ್ನ ವೆಬ್ಸೈಟ್ ಸೋಮವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಮೈಕ್ ಪೆನ್ಸ್ ಕುರಿತು ಕುತೂಹಲಕಾರಿ ಸಂದೇಶವನ್ನು ಪ್ರದರ್ಶಿಸಿದ್ದು, ಅವರ ಅವಧಿ ಕೊನೆಗೊಂಡಿವೆ ಎಂದು ಹೇಳಿದೆ.
"ಡೊನಾಲ್ಡ್ ಜೆ. ಟ್ರಂಪ್ ಅವರ ಅವಧಿ 2021-01-11 19:42:55ರಂದು ಕೊನೆಗೊಂಡಿತು" ಎಂದು ವೆಬ್‌ಸೈಟ್‌ನಲ್ಲಿ ಬರೆಯಲಾಗಿತ್ತು.
ಯುಎಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ಸ್ನ ವೆಬ್ಸೈಟ್ "ಮೈಕೆಲ್ ಆರ್. ಪೆನ್ಸ್ ಅವರ ಅವಧಿ 2021-01-11 19:46:38ರಂದು ಕೊನೆಗೊಂಡಿತು" ಎಂದು ಬರೆಯಲಾಗಿತ್ತು.
ಯುಎಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ಸ್ನ ವೆಬ್ಸೈಟ್ ಈ ಸಂದೇಶಗಳ ಹಿಂದಿನ ಕಾರಣಗಳು ಸ್ಪಷ್ಟವಾಗಿಲ್ಲ. ಸ್ವಲ್ಪ ಸಮಯದ ನಂತರ ಸಂದೇಶಗಳನ್ನು ತೆಗೆದುಹಾಕಲಾಗಿದ್ದು, "ಕ್ಷಮಿಸಿ, ಈ ಸೈಟ್ ಪ್ರಸ್ತುತ ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿದೆ. ದಯವಿಟ್ಟು ಕೆಲವು ಕ್ಷಣಗಳಲ್ಲಿ ಮತ್ತೆ ಪ್ರಯತ್ನಿಸಿ." ಎಂದು ಬರೆಯಲಾಗಿತ್ತು.
ಯುಎಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ಸ್ನ ವೆಬ್ಸೈಟ್ ಕೆಲವು ಸ್ಥಳೀಯ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಇದರ ಹಿಂದೆ "ಅಸಮಾಧಾನಗೊಂಡ ರಾಜ್ಯ ಇಲಾಖೆಯ ಸಿಬ್ಬಂದಿ"ಯ ಕೈವಾಡ ಎಂದು ಎಂದು ಹೇಳುತ್ತಿವೆ. ಈ ಘಟನೆಯ ಬಗ್ಗೆ ಶ್ವೇತಭವನ ಮತ್ತು ರಾಜ್ಯ ಇಲಾಖೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.