ವಾಷಿಂಗ್ಟನ್:ಆ್ಯಂಟಿ ಸರ್ಫೇಸ್ ಹಾಗೂ ಆ್ಯಂಟಿ ಸಬ್ಮೆರಿನ್ ವಾರ್ ಫೇರ್ ಮಿಷನ್ಗಳನ್ನ ಎದಿರಿಸುವ ಸಾಮರ್ಥ್ಯ ಹೊಂದಿರುವ ಅಮೆರಿಕದ 24 ಎಂಎಚ್ -60 ಹೆಲಿಕಾಪ್ಟರ್ಗಳನ್ನ ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಒಪ್ಪಿಕೊಂಡಿದೆ.
ಈ ವ್ಯವಹಾರಕ್ಕೆಅಮೆರಿಕ ಸೆನೆಟ್ ಒಪ್ಪಿಗೆ ಕೂಡಾ ನೀಡಿದೆ. ಈ ಯುದ್ಧ ಹೆಲಿಕಾಪ್ಟರ್ಗಳು ಭಾರತ ಸೇನೆಗೆ ಸೇರ್ಪಡೆಯಾದರೆ ಭಾರತದ ಗಡಿಯಲ್ಲಿ ಹದ್ದಿನ ಕಣ್ಣಿಡಲು, ವಿರೋಧಿಗಳ ಚಲನವಲನದ ಮೇಲೆ ನಿಗಾ ಇಡಲು ನೆರವಾಗಲಿವೆ.
ವಿದೇಶಿ ಮಿಲಿಟರಿ ಮಾರಾಟ ಒಪ್ಪಂದದ ಅನ್ವಯ ಈ ಮಾರಾಟಕ್ಕೆ ಸೆನೆಟ್ ಅಸ್ತು ಎಂದಿದೆ. ಅಪಾಯದಲ್ಲಿರುವವರ ಹುಡುಕಾಟ, ರಕ್ಷಣೆ ಹಾಗೂ ಸಂವಹನ ಸಾಧಿಸಲು ಈ ಹೆಲಿಕಾಫ್ಟರ್ಗಳು ಸೇನೆಯ ನೆರವಿಗೆ ಧಾವಿಸಲಿವೆ. ಪ್ರಾದೇಶಿಕ ಬೆದರಿಕೆಗಳನ್ನ ಎದಿರಿಸಲು ಈ ಸುಸಜ್ಜಿತ ಹೆಲಿಕಾಫ್ಟರ್ಗಳು ನೆರವು ನೀಡಲಿವೆ ಎಂದು ಹೇಳಲಾಗುತ್ತಿದೆ.
ಸುಮಾರು 2.6 ಬಿಲಿಯನ್ ಡಾಲರ್ಗಳ ವ್ಯವಹಾರ ಇದಾಗಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 17 ಸಾವಿರ ಕೋಟಿ ರೂ. ಆಗಿದೆ.