ವಾಷಿಂಗ್ಟನ್:ಕೋವಿಡ್-19 ಮೂಲದ ಬಗ್ಗೆ ಪಾರದರ್ಶಕ ಮತ್ತು ಸಮಗ್ರ ತನಿಖೆಗೆ ಕರೆ ನೀಡಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ, ಸಾಂಕ್ರಾಮಿಕ ರೋಗ ಹಬ್ಬುವುದನ್ನು ತಪ್ಪಿಸಬಹುದಾಗಿದ್ದ ಬೀಜಿಂಗ್, ವೈರಸ್ ಬಗ್ಗೆ ಪ್ರಮುಖ ಮಾಹಿತಿ ಬಹಿರಂಗಪಡಿಸಲಿಲ್ಲ. ಒಂದು ವೇಳೆ ಸಹಕಾರ ನೀಡಿದ್ದರೇ ವಿಜ್ಞಾನಿಗಳಿಗೆ ಜಗತ್ತನ್ನು ವೈರಸ್‌ನಿಂದ ರಕ್ಷಿಸಲು ನೆರವಾಗುತ್ತಿತ್ತು ಎಂದರು.
ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಪ್ಪಿಸಬಹುದಾಗಿತ್ತು. ಬೇರೆ ಯಾವುದೇ ಜವಾಬ್ದಾರಿಯುತ ದೇಶವಾಗಿದ್ದರೇ ಏಕಾಏಕಿಯಾಗಿ ಹಬ್ಬಿದ ಕೆಲವೇ ದಿನಗಳಲ್ಲಿ ವಿಶ್ವ ಆರೋಗ್ಯ ತನಿಖಾಧಿಕಾರಿಗಳನ್ನು ವುಹಾನ್‌ಗೆ ಆಹ್ವಾನಿಸುತ್ತಿತ್ತು. ಚೀನಾ ಅಮೆರಿಕ ಸೇರಿದಂತೆ ಇತರೆ ರಾಷ್ಟ್ರಗಳ ಸಹಾಯದ ಪ್ರಸ್ತಾಪ ನಿರಾಕರಿಸಿತು. ಧೈರ್ಯಶಾಲಿ ಚೀನಾದ ವೈದ್ಯರು, ವಿಜ್ಞಾನಿಗಳು ಮತ್ತು ಪತ್ರಕರ್ತರಿಗೆ ಶಿಕ್ಷೆ ವಿಧಿಸಿತ್ತಾ ವೈರಸ್ನ ಅಪಾಯಗಳ ಬಗ್ಗೆ ಜಗತ್ತನ್ನು ಎಚ್ಚರಿಸಲಿಲ್ಲ ಎಂದು ಟೀಕಿಸಿದರು.