ಕರ್ನಾಟಕ

karnataka

ETV Bharat / international

ಔಪಚಾರಿಕವಾಗಿ ತಾಲಿಬಾನಿಗಳನ್ನು ಅಮೆರಿಕ ಗುರುತಿಸುವುದಿಲ್ಲ: ಸೆನೆಟರ್‌ ಕ್ರಿಸ್ ಮರ್ಫಿ - ಅಫ್ಘಾನ್‌ ಬಿಕ್ಕಟ್ಟು

ಅಫ್ಘಾನ್‌ನಲ್ಲಿ ಔಪಚಾರಿಕವಾಗಿ ತಾಲಿಬಾನಿಗಳನ್ನು ಅಮೆರಿಕ ಗುರುತಿಸುವುದಿಲ್ಲ ಎಂದು ಆಡಳಿತಾರೂಢ ಡೆಮಾಕ್ರಟಿಕ್‌ ಪಕ್ಷದ ಸೆನಟರ್‌ ಕ್ರಿಸ್ ಮರ್ಫಿ ಹೇಳಿದ್ದಾರೆ.

US should not recognise Taliban, says Democratic Senator
ಔಪಚಾರಿಕವಾಗಿ ತಾಲಿಬಾನ್‌ಗಳನ್ನು ಅಮೆರಿಕ ಗುರುತಿಸುವುದಿಲ್ಲ - ಸೆನಟರ್‌ ಕ್ರಿಸ್ ಮರ್ಫಿ

By

Published : Aug 30, 2021, 9:14 AM IST

ವಾಷಿಂಗ್ಟನ್‌: ತಮ್ಮ 13 ಯೋಧರನ್ನು ಹತ್ಯೆಗೈದ ಉಗ್ರರ ವಿರುದ್ಧ ಸಮರ ಸಾರಿರುವ ಅಮೆರಿಕ, ಐಸಿಸ್‌-ಕೆ ಭಯೋತ್ಪಾದಕರನ್ನು ಹುಡುಕಿ ಹುಡುಕಿ ಹತ್ಯೆಗೈಯ್ಯಲು ಮುಂದಾಗಿದೆ. ತಾಲಿಬಾನ್‌ ಸಂಘಟನೆಯನ್ನು ಡಿಫ್ಯಾಕ್ಟೊ ರೂಲರ್‌ ಎಂದು ಪರಿಗಣಿಸುವ ಸಾಧ್ಯತೆಯ ಬೆನ್ನಲ್ಲೇ ಇದೀಗ ಔಪಚಾರಿಕವಾಗಿ ತಾಲಿಬಾನಿಗಳನ್ನು ಅಮೆರಿಕ ಗುರುತಿಸುವುದಿಲ್ಲ ಎಂದು ಆಡಳಿತಾರೂಢ ಡೆಮಾಕ್ರಟಿಕ್‌ ಪಕ್ಷದ ಸೆನಟರ್‌ ಕ್ರಿಸ್ ಮರ್ಫಿ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮರ್ಫಿ, ತಾಲಿಬಾನ್‌ ಆಡಳಿತವನ್ನು ಯುಎಸ್‌ ಅಧಿಕೃತವಾಗಿ ಗುರುತಿಸುತ್ತದೆಯೇ ಎಂಬ ಪ್ರಶ್ನೆಗೆ, ಇಲ್ಲವೇ ಇಲ್ಲ ಎಂಬ ಉತ್ತರ ನೀಡಿದ್ದಾರೆ.

ಆ ದೇಶವನ್ನು ನಿಜವಾಗಿ ನಡೆಸದಿರುವ ವಿರೋಧಿ ಶಕ್ತಿಗಳನ್ನು ಗುರುತಿಸುವುದು ಉತ್ತಮ ವಿಚಾರ ಎಂದು ನನಗನ್ನಿಸುವುದಿಲ್ಲ. ಸರ್ಕಾರವನ್ನು ನಡೆಸುವವರು, ಸರ್ಕಾರದ ನಾಯಕರಾಗಿ ನಾವು ಜನರು ಆಯ್ಕೆ ಮಾಡಿದ ನಾಯಕರನ್ನು ಗುರುತಿಸುವಲ್ಲಿ ಸೋತಿದ್ದೇವೆ. ಆದರೂ ಯುಎಸ್ ತಾಲಿಬಾನ್ ಜೊತೆ ಮಾತನಾಡಬೇಕು ಎಂದು ಮರ್ಫಿ ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕ, ಮೈತ್ರಿ ರಾಷ್ಟ್ರಗಳ ಪ್ರಜೆಗಳ ಸ್ಥಳಾಂತರ ಬಹುತೇಕ ಪೂರ್ಣ; ತಾಲಿಬಾನ್ ತೆಕ್ಕೆಗೆ ಕಾಬೂಲ್‌ ಏರ್ಪೋರ್ಟ್‌

ನಾವು ಅವರನ್ನು ಔಪಚಾರಿಕವಾಗಿ ಗುರುತಿಸದಿದ್ದರೂ ಸಹ ಅವರೊಂದಿಗೆ ಚರ್ಚಿಸಬೇಕಾಗಿದೆ. ಅವರ ಕ್ರಮಗಳ ಪರಿಣಾಮಗಳನ್ನು ನಾವು ಅವರಿಗೆ ಹೇಳಲು ಹೊರಟಿದ್ದೇವೆ. ತಾಲಿಬಾನ್‌ಗಳು ಕನಿಷ್ಠ ಅಮೆರಿಕನ್ ನಾಗರಿಕರು, ಗ್ರೀನ್ ಕಾರ್ಡ್ ಹೊಂದಿರುವವರು ಮತ್ತು ಎಸ್‌ಐವಿ ಪೈಪ್‌ಲೈನ್‌ನಲ್ಲಿರುವ ಜನರು ದೇಶದಿಂದ ಹೊರಬರಲು ಅವಕಾಶ ನೀಡುವುದನ್ನು ಮುಂದುವರಿಸಬೇಕು ಎಂದು ತಿಳಿಸಿದ್ದಾರೆ. ಕ್ರಿಸ್ ಮರ್ಫಿ ಅವರು ಪೂರ್ವ, ದಕ್ಷಿಣ ಏಷ್ಯಾ, ಮಧ್ಯ ಏಷ್ಯಾ ಮತ್ತು ಭಯೋತ್ಪಾದನೆ ನಿಗ್ರಹದ ಸೆನೆಟ್ ವಿದೇಶಿ ಸಂಬಂಧಗಳ ಉಪಸಮಿತಿಯ ಅಧ್ಯಕ್ಷರಾಗಿದ್ದಾರೆ.

ಅಮೆರಿಕದ ಹಾದಿಯಲ್ಲೇ ಫ್ರಾನ್‌ ಕೂಡ ಸಾಗಿದ್ದು, ಇಸ್ಲಾಮಿಸ್ಟ್‌ ಗ್ರೂಪ್‌ ಅನ್ನು ಅಫ್ಘಾನ್‌ ದೇಶದ ಹೊಸ ಆಡಳಿತಗಾರರನ್ನಾಗಿ ಗುರುತಿಸುವುದಿಲ್ಲ ಎಂದು ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ತಿಳಿಸಿದ್ದಾರೆ. ಈ ಬಗ್ಗೆ ನಿನ್ನೆ ಮಾತನಾಡಿರುವ ಅವರು, ತಾಲಿಬಾನ್‌ಗಳ ಹಕ್ಕುಗಳು ಮತ್ತು ಭಯೋತ್ಪಾದನೆಯನ್ನು ತಿರಸ್ಕರಿಸುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ABOUT THE AUTHOR

...view details