ವಾಷಿಂಗ್ಟನ್:ಯುಎಸ್ ಸೆನೆಟರ್ ಟೆಡ್ ಕ್ರೂಜ್ ಅವರು ಮೂರು ಮಸೂದೆಗಳನ್ನು ಪರಿಚಯಿಸಿದ್ದು, ಕೊರೊನಾ ವೈರಸ್ ಹರಡಲು ಚೀನಾವೇ ಹೊಣೆ ಎಂದು ಇದರ ಮೂಲಕ ಸಾಬಿತುಪಡಿಸುವುದಾಗಿ ತಿಳಿಸಿದ್ದಾರೆ.
ಚೀನಾ ಕೊರೊನಾ ಹರಡಿದ್ದನ್ನು ಸಾಬೀತುಪಡಿಸಲು ಅಮೆರಿಕಾದಲ್ಲಿ ಹೊಸ ಮಸೂದೆ! - ಯುಎಸ್ ಸೆನೆಟರ್ ಟೆಡ್ ಕ್ರೂ
ಕೊರೊನಾ ವೈರಸ್ನ ಆರಂಭಿಕ ಹಂತಗಳಲ್ಲಿ ಚೀನಾ ತಪ್ಪು ಮಾಹಿತಿ ನೀಡುತ್ತಿತ್ತು ಹಾಗೂ ಸತ್ಯವನ್ನು ಮರೆಮಾಚುತ್ತಿತ್ತು. ಇದೀಗ ವೈರಸ್ ಹರಡಲು ಚೀನಾವೇ ಕಾರಣ ಎಂದು ಸಾಬೀತುಪಡಿಸಲು ಅಮೆರಿಕಾ ಮಸೂದೆ ಪರಿಚಯಿಸಿದೆ.
us
"ಕೊರೊನಾ ಹರಡಲು ಚೀನಾವೇ ಜವಾಬ್ದಾರಿ ಎಂಬುದು ತಿಳಿಸಲು ಇಂದು ನಾನು ಮೂರು ಶಾಸನಗಳನ್ನು ಪರಿಚಯಿಸಿದ್ದೇನೆ" ಎಂದು ಕ್ರೂಜ್ ಸೆನೆಟ್ನಲ್ಲಿ ಹೇಳಿದರು.
ಕೊರೊನಾ ವೈರಸ್ನ ಆರಂಭಿಕ ಹಂತಗಳಲ್ಲಿ ಚೀನಾ ತಪ್ಪು ಮಾಹಿತಿ ನೀಡುತ್ತಿತ್ತು ಹಾಗೂ ಸತ್ಯವನ್ನು ಮರೆಮಾಚುತ್ತಿತ್ತು. ಇದರಿಂದಾಗಿಯೇ ವೈರಸ್ ಪ್ರಪಂಚದಾದ್ಯಂತ ಹರಡಿದೆ ಎಂದು ಯುನೈಟೆಡ್ ಸ್ಟೇಟ್ಸ್ ಆರೋಪಿಸಿದೆ.