ವಾಷಿಂಗ್ಟನ್:ರಿಪಬ್ಲಿಕನ್ ಪಕ್ಷದ ಸದಸ್ಯರು ಹೆಚ್ಚಿರುವ ಅಮೆರಿಕದ ಸೆನೆಟ್ ಬುಧವಾರ 500 ಬಿಲಿಯನ್ ಯುಎಸ್ ಡಾಲರ್ನ ಮೊತ್ತದ ಕೊರೊನಾ ವೈರಸ್ ಪರಿಹಾರ ಮಸೂದೆ ಪರ ಮತ ಚಲಾಯಿಸಲಿದೆ ಎಂದು ಸೆನೆಟ್ ಮೆಜಾರಿಟಿ ಲೀಡರ್ ಮೆಕ್ ಕಾನ್ನೆಲ್ ಘೋಷಿಸಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಅಕ್ಟೋಬರ್ 9ರಂದು 1.8 ಟ್ರಿಲಿಯನ್ ಯುಎಸ್ ಡಾಲರ್ಗಳ ಪರಿಹಾರ ಮಸೂದೆಯ ಪ್ಯಾಕೇಜ್ ಪ್ರಸ್ತಾಪವನ್ನು ಮಂಡಿಸಿತ್ತು. ಇದಾದ ನಂತರ ಮೆಕ್ ಕಾನ್ನೆಲ್ ಶನಿವಾರ ಮಾಹಿತಿ ನೀಡಿದ್ದು, ಪರಿಹಾರ ಮಸೂದೆ ಪರ ಮತ ಚಲಾಯಿಸಲಿದೆ ರಿಪಬ್ಲಿಕನ್ ಪಕ್ಷ ಮತ ಹಾಕಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.