ಕರ್ನಾಟಕ

karnataka

ETV Bharat / international

ಅಮೆರಿಕದ ಶಾಲೆಗಳಲ್ಲಿ ಮಾಸ್ಕ್​ ಕಡ್ಡಾಯ - America covid

ಯುನೈಟೆಡ್ ಸ್ಟೇಟ್ಸ್‌ನ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಾಸ್ಕ್​ ಹಾಕುವುದನ್ನು ಮುಂದುವರಿಸಬೇಕು. ಶಾಲೆ, ಸ್ಕೂಲ್​ ಬಸ್​​ಗಳಲ್ಲಿ ದೈಹಿಕ ಅಂತರವನ್ನು ಪಾಲಿಸಬೇಕು ಎಂದು ಸಿಡಿಸಿ ತಿಳಿಸಿದೆ.

US schools should continue to use masks: CDC
ಅಮೆರಿಕದ ಶಾಲೆಗಳಲ್ಲಿ ಮಾಸ್ಕ್​ ಕಡ್ಡಾಯ

By

Published : May 16, 2021, 7:03 AM IST

ವಾಷಿಂಗ್ಟನ್: ಸಂಪೂರ್ಣವಾಗಿ ಲಸಿಕೆ ಪಡೆದವರು ಮಾಸ್ಕ್​ ಧರಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ​), ಇದೀಗ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯವೆಂದು ಹೇಳಿದೆ.

ಎಲ್ಲಾ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗುವುದಿಲ್ಲ. ಹೀಗಾಗಿ 2020-2021ರ ಶೈಕ್ಷಣಿಕ ವರ್ಷದಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಶಾಲೆಗಳಲ್ಲಿ ಕಿಂಡರ್​ ಗಾರ್ಟನ್​ನಿಂದ 12ನೇ ಗ್ರೇಡ್​ವರೆಗಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಾಸ್ಕ್​ ಹಾಕುವುದನ್ನು ಮುಂದುವರಿಸಬೇಕು. ಶಾಲೆ, ಸ್ಕೂಲ್​ ಬಸ್​​ಗಳಲ್ಲಿ ದೈಹಿಕ ಅಂತರವನ್ನು ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ಇದನ್ನೂ ಓದಿ:ಸಂಪೂರ್ಣವಾಗಿ ಲಸಿಕೆ ಪಡೆದವರು ಮಾಸ್ಕ್​​ ಧರಿಸಬೇಕಿಲ್ಲ- ಅಮೆರಿಕ

ಎರಡು ದಿನಗಳ ಹಿಂದಷ್ಟೇ ಹೊಸ ಕೋವಿಡ್​ ಮಾರ್ಗಸೂಚಿ ಹೊರಡಿಸಿದ್ದ ಸಿಡಿಸಿ, ಕೋವಿಡ್​ ಲಸಿಕೆಯ ಎರಡೂ ಡೋಸ್​ಗಳನ್ನು ಪಡೆದವರಿಗೆ ಮಾಸ್ಕ್ ಅವಶ್ಯಕತೆ ಇಲ್ಲ. ದೈಹಿಕ ಅಂತರ ಕಾಯ್ದುಕೊಳ್ಳಬೇಕಿಲ್ಲ. ದೇಶದೊಳಗೆ ಪ್ರಯಾಣಿಸುವವರು ಕ್ವಾರಂಟೈನ್​ಗೆ ಒಳಪಡುವ ಅಗತ್ಯತೆಯೂ ಇಲ್ಲ ಎಂದಿತ್ತು.

ಸಿಡಿಸಿ ಮಾರ್ಗಸೂಚಿಯನ್ನು ಅಮೆರಿಕ​ ಅಧ್ಯಕ್ಷ ಜೋ ಬೈಡನ್ ಕೂಡ ಶ್ಲಾಘಿಸಿದ್ದರು. "ಲಸಿಕೆ ಪಡೆಯಿರಿ ಅಥವಾ ವ್ಯಾಕ್ಸಿನ್​ ಹಾಕಿಸಿಕೊಳ್ಳುವವರೆಗೂ ಮಾಸ್ಕ್​​ ಧರಿಸಿ" ಎಂದು ಅವರು ಮಾಸ್ಕ್​ ಧರಿಸದೇ ಶ್ವೇತಭವನದ ಎದುರು ಮಾಧ್ಯಮಗಳ ಮುಂದೆ ಬಂದು ಹೇಳಿದ್ದರು.

ABOUT THE AUTHOR

...view details