ಕರ್ನಾಟಕ

karnataka

ETV Bharat / international

Omicron death: ಮಹಾಮಾರಿ ಒಮಿಕ್ರಾನ್​ಗೆ ಅಮೆರಿಕದಲ್ಲಿ ಮೊದಲ ಬಲಿ - ಮಹಾಮಾರಿ ಒಮಿಕ್ರಾನ್​ಗೆ ಅಮೆರಿಕದಲ್ಲಿ ಮೊದಲ ಬಲಿ

US reports 1st Omicron-related death: ಅಮೆರಿಕದಲ್ಲೂ ಮಹಾಮಾರಿ ಒಮಿಕ್ರಾನ್​ ಮೊದಲ ಬಲಿ ಪಡೆದಿದೆ. ಇತ್ತೀಚೆಗೆ ಬ್ರಿಟನ್​ನಲ್ಲಿ ವಿಶ್ವದಲ್ಲೇ ಮೊದಲ ಸಾವು ಒಮಿಕ್ರಾನ್​ ವೈರಸ್​​ನಿಂದ ಸಂಭವಿಸಿತ್ತು.

Omicron death in America
ಒಮಿಕ್ರಾನ್​ಗೆ ಅಮೆರಿಕದಲ್ಲಿ ಮೊದಲ ಬಲಿ

By

Published : Dec 21, 2021, 11:34 AM IST

Updated : Dec 21, 2021, 11:42 AM IST

ವಾಷಿಂಗ್ಟನ್​(ಅಮೆರಿಕ): ರೂಪಾಂತರಿ ಕೋವಿಡ್​ ವೈರಸ್ ಒಮಿಕ್ರಾನ್​​ಗೆ ವಿಶ್ವದಲ್ಲಿ 13ನೇ ಸಾವು ಸಂಭವಿಸಿದೆ. ಅಮೆರಿಕದ ಟೆಕ್ಸಾಸ್​ನಲ್ಲಿ 50 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಒಮಿಕ್ರಾನ್​ಗೆ ಬಲಿಯಾದ ಅಮೆರಿಕದ ಮೊದಲ ವ್ಯಕ್ತಿ ಇವರಾಗಿದ್ದಾರೆ.

ಹೌದು, ವಿಶ್ವದಲ್ಲಿ ಅತ್ಯಂತ ವೇಗವಾಗಿ ತನ್ನ ಕಬಂಧಬಾಹುಗಳನ್ನು ಚಾಚುತ್ತಿರುವ ಮಹಾಮಾರಿ ಒಮಿಕ್ರಾನ್​ 13ನೇ ಬಲಿ ಪಡೆದಿದೆ. ಈ ವ್ಯಕ್ತಿ ಹಿಂದೆ ಕೋವಿಡ್​-19 ಸೋಂಕಿತನಾಗಿದ್ದ ಮತ್ತು ಕೊರೊನಾ ಲಸಿಕೆ ಪಡೆದಿರಲಿಲ್ಲ ಎಂಬ ಮಾಹಿತಿ ಹ್ಯಾರಿಸ್ ಪ್ರಾದೇಶಿಕ​ ಸಾರ್ವಜನಿಕ ಆರೋಗ್ಯ ಇಲಾಖೆಯಿಂದ ಸಿಕ್ಕಿದೆ.

ಈ ವ್ಯಕ್ತಿ ಕೊರೊನಾ ಬಾಧಿಸಿದ್ದರಿಂದ ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಮತ್ತು ವ್ಯಾಕ್ಸಿನ್​ ಸಹ ಪಡೆದಿರಲಿಲ್ಲವೆಂದು ಸಿಎನ್​ಎನ್​ ಮಾಧ್ಯಮ ವರದಿ ಮಾಡಿದೆ.

50 ವರ್ಷದ ವ್ಯಕ್ತಿ ಒಮಿಕ್ರಾನ್​ನಿಂದ ಮೃತಪಟ್ಟಿರುವುದಾಗಿ ಇಲ್ಲಿನ ಕೌಂಟಿ ಜಡ್ಜ್​ ಲಿನಾ ಹಿಡಾಲ್ಗೊ ಬಹಿರಂಗಪಡಿಸಿದ್ದಾರೆ.

Last Updated : Dec 21, 2021, 11:42 AM IST

ABOUT THE AUTHOR

...view details