ಕರ್ನಾಟಕ

karnataka

ETV Bharat / international

ವಿಶ್ವದ ಕುತೂಹಲ ಕೆರಳಿಸಿದೆ ಟ್ರಂಪ್​ ನಿಗೂಢ ಟ್ವೀಟ್​​​! - ಟ್ರಂಪ್ ನಿಗೂಢ ಟ್ವೀಟ್

ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷರು ಐಸಿಸ್ ಉಗ್ರರ ದಮನಕ್ಕಾಗಿ ವಿಶೇಷ ಕಾರ್ಯಾಚರಣೆಗೆ ಅನುಮತಿ ನೀಡಿದ್ದರು. ಐಸಿಸ್ ಉಗ್ರ ಸಂಘಟನೆಯ ನಾಯಕ ಅಬು ಬಕರ್ ಅಲ್​-ಬಗ್ದಾದಿಯನ್ನು ಗುರಿಯಾಗಿಸಿ ಈ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

By

Published : Oct 27, 2019, 10:24 AM IST

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರದಂದು ಅತ್ಯಂತ ಮಹತ್ವದ ಘೋಷಣೆ ಹೊರಡಿಸಲಿದ್ದಾರೆ ಎಂದು ಶನಿವಾರ ವೈಟ್​ಹೌಸ್ ಮೂಲ ಹೇಳಿತ್ತು. ಇದಕ್ಕೆ ಪೂರಕವಾಗಿ ಟ್ರಂಪ್ ಇಂದು ಮುಂಜಾನೆ ನಿಗೂಢ ಟ್ವೀಟ್ ಮಾಡಿದ್ದಾರೆ.

'ಅತ್ಯಂತ ದೊಡ್ಡ ಘಟನೆಯೊಂದು ಸಂಭವಿಸಿದೆ' ಎಂದು ಡೊನಾಲ್ಡ್ ಟ್ರಂಪ್ ಇಂದು ಮುಂಜಾನೆ 6.53ರ ಸುಮಾರಿಗೆ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್​ನಲ್ಲಿ ಏನಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷರು ಐಸಿಸ್ ಉಗ್ರರ ದಮನಕ್ಕಾಗಿ ವಿಶೇಷ ಕಾರ್ಯಾಚರಣೆಗೆ ಅನುಮತಿ ನೀಡಿದ್ದರು. ಐಸಿಸ್ ಉಗ್ರ ಸಂಘಟನೆಯ ನಾಯಕ ಅಬು ಬಕರ್​ ಅಲ್​-ಬಗ್ದಾದಿಯನ್ನು ಗುರಿಯಾಗಿಸಿ ಈ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಟ್ರಂಪ್ ಟ್ವೀಟ್ ಜಾಗತಿಕಮಟ್ಟದಲ್ಲಿ ಭಾರಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದು, ಯಾವ ವಿಚಾರದ ಬಗ್ಗೆ ಟ್ರಂಪ್ ಹೇಳಹೊರಟಿದ್ದಾರೆ ಎನ್ನುವ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಮುಂದಿನ ಟ್ವೀಟ್​ನಲ್ಲಿ ಅಮೆರಿಕ ಅಧ್ಯಕ್ಷರು ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.

ABOUT THE AUTHOR

...view details