ವಾಷಿಂಗ್ಟನ್:ಫೆ.24 ಹಾಗೂ 25 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವೈಟ್ಹೌಸ್ ಖಚಿತ ಪಡಿಸಿದೆ.
ಟ್ರಂಪ್ರ ಈ ಪ್ರವಾಸವು ಅಮೆರಿಕಾ ಹಾಗೂ ಭಾರತದ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುತ್ತದೆ. ಅಲ್ಲದೇ ಅಮೆರಿಕನ್ ಹಾಗೂ ಭಾರತೀಯರ ನಡುವಿನ ನಿರಂತರ ಬಂಧವನ್ನು ಎತ್ತಿ ತೋರಿಸುತ್ತದೆ ಎಂದು ಶ್ವೇತಭವನ ಟ್ವೀಟ್ ಮಾಡಿದೆ.
ಅಮೆರಿಕ ಅಧ್ಯಕ್ಷರದ್ದು ಇದು 2020 ರ ಭಾರತದ ಮೊದಲ ಅಧಿಕೃತ ಪ್ರವಾಸವಾಗಲಿದ್ದು, ಅಮೆರಿಕಾದ ಪ್ರಥಮ ಮಹಿಳೆ (ಟ್ರಂಪ್ರ ಪತ್ನಿ) ಮೆಲಾನಿಯಾ ಟ್ರಂಪ್ ಕೂಡ ಡೊನಾಲ್ಡ್ ಟ್ರಂಪ್ ಜೊತೆ ಭಾರತಕ್ಕೆ ಆಗಮಿಸಲಿದ್ದಾರೆ.
ಫೆ.24ಕ್ಕೆ ದೆಹಲಿಗೆ ಬಂದಿಳಿಯುವ ಡೊನಾಲ್ಡ್ ಟ್ರಂಪ್ ಹಾಗೂ ಮೆಲಾನಿಯಾ ಟ್ರಂಪ್ ಮೊದಲು ನರೇಂದ್ರ ಮೋದಿಯವರ ತವರಾದ, ಮಹಾತ್ಮ ಗಾಂಧಿಯವರ ಜೀವನ ಹಾಗೂ ಭಾರತದ ಸ್ವಾತಂತ್ರ್ಯ ಚಳವಳಿಯ ನಾಯಕತ್ವದಲ್ಲಿ ಮಹತ್ವದ ಪಾತ್ರ ವಹಿಸಿರುವ ಗುಜರಾತ್ನ ಅಹಮದಾಬಾದ್ಗೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಟ್ರಂಪ್ರ ಭೇಟಿ ಕುರಿತು ಎರಡೂ ರಾಷ್ಟ್ರಗಳೂ ಸಂಪರ್ಕದಲ್ಲಿದ್ದು, ಖಚಿತ ಮಾಹಿತಿ ಸಿಕ್ಕ ಮೇಲೆ ಮಾಧ್ಯಮಗಳೊಂದಿಗೆ ವಿಷಯ ಹಂಚಿಕೊಳ್ಳಲಿದ್ದೇವೆ ಎಂದು ಜ. 16ರಂದು ವಿದೇಶಾಂಗ ವಕ್ತಾರ ರವೀಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಇದೀಗ ಟ್ರಂಪ್ರ ಭಾರತ ಪ್ರವಾಸ ಖಚಿತವಾಗಿದೆ. ಇನ್ನು ಹೌಡಿ-ಮೋದಿಯಂತೆಯೇ ಗುಜರಾತ್ನಲ್ಲಿ ಟ್ರಂಪ್ಗಾಗಿ ಬಹುದೊಡ್ಡ ಕಾರ್ಯಕ್ರಮ ಆಯೋಜಿಸಲಾಗುತ್ತೆ ಎಂದು ಹೇಳಲಾಗುತ್ತಿದೆ.