ಕರ್ನಾಟಕ

karnataka

ETV Bharat / international

ಶೃಂಗಸಭೆಗೆ ಟ್ರಂಪ್​ ದಿಢೀರ್​ ಭೇಟಿ... ಮೋದಿ ಭಾಷಣ ಆಲಿಸಿದ ಅಮೆರಿಕ ಅಧ್ಯಕ್ಷ! - ಉನ್ನತ ಮಟ್ಟದ ಹವಾಮಾನ ಶೃಂಗಸಭೆ

ಉನ್ನತ ಮಟ್ಟದ ಹವಾಮಾನ ಶೃಂಗಸಭೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ದಿಢೀರ್​ ಭೇಟಿ ನೀಡಿದ್ದರು.​ ಕೇವಲ 15 ನಿಮಿಷಗಳ ಕಾಲ ಮಾತ್ರ ಸಭೆಯಲ್ಲಿದ್ದರೂ ಕೂಡ ಟ್ರಂಪ್​ ಪ್ರಧಾನಿ ಮೋದಿಯವರ ಭಾಷಣದ ವೇಳೆ ಹಾಜರಿದ್ದದ್ದು ಗಮನ ಸೆಳೆಯಿತು.

ಶೃಂಗಸಭೆ

By

Published : Sep 23, 2019, 10:15 PM IST

ನ್ಯೂಯಾರ್ಕ್​ (ಅಮೆರಿಕ):ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನ್ಯೂಯಾರ್ಕ್​ನಲ್ಲಿ ನಡೆದ ಉನ್ನತ ಮಟ್ಟದ ಹವಾಮಾನ ಶೃಂಗಸಭೆಗೆ ದಿಢೀರ್​ ಭೇಟಿ ನೀಡಿದ್ದರು. ಸಭೆಯಲ್ಲಿ ಅವರು ಮಾತನಾಡದಿದ್ದರೂ ಕೂಡ ಪ್ರಧಾನಿ ನರೇಂದ್ರ ಮೋದಿ ಹಾಗೂ ಜರ್ಮನಿ ಛಾನ್ಸಲರ್​​ ಆಂಗೆಲಾ ಮರ್ಕೆಲ್​ ಅವರ ಭಾಷಣ ಕೇಳಿ ನಿರ್ಗಮಿಸಿದರು.

ನಿನ್ನೆ ನ್ಯೂಯಾರ್ಕ್​ನಲ್ಲಿ ನಡೆದ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಟ್ರಂಪ್​ ಅವರನ್ನು ಹಾಡಿಹೊಗಳಿದ್ದರು. ಇದೀಗ ಟ್ರಂಪ್​ ಶೃಂಗಸಭೆಯಲ್ಲಿ ಕೇವಲ 15 ನಿಮಿಷಗಳ ಕಾಲ ಇದ್ದರೂ ಕೂಡ ಪ್ರಧಾನಿ ಮೋದಿಯವರ ಭಾಷಣದ ವೇಳೆಯೇ ಹಾಜರಿದ್ದದ್ದು ಗಮನ ಸೆಳೆಯಿತು. ಬಳಿಕ ಅವರು ಜರ್ಮನಿ ಛಾನ್ಸಲರ್​​ ಆಂಗೆಲಾ ಮರ್ಕೆಲ್​ ಅವರ ಭಾಷಣ ಮುಗಿದ ಕೂಡಲೇ ಸಭೆಯಿಂದ ತೆರಳಿದರು.

ಜಾಗತಿಕ ಹವಾಮಾನ ಬದಲಾವಣೆ ಕುರಿತಂತೆ ನಡೆದ ಉನ್ನತ ಮಟ್ಟದ ಹವಾಮಾನ ಶೃಂಗಸಭೆಯಲ್ಲಿ ಜಗತ್ತಿನ ವಿವಿಧ 63 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಭಾರತದಲ್ಲಿ ಕೋಟ್ಯಂತರ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ, ಜಲ ಸಂರಕ್ಷಣೆ ಹಾಗೂ ಮಳೆನೀರು ಕೊಯ್ಲಿನ ಅಭಿವೃದ್ಧಿಗೆ ಮಿಷನ್ 'ಜಲ ಜೀವನ್' ಯೋಜನೆ ಆರಂಭಿಸಿರುವ ಬಗ್ಗೆ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಗಮನ ಸೆಳೆದರು.

ABOUT THE AUTHOR

...view details