ಕರ್ನಾಟಕ

karnataka

ಚೀನಾ ವೈರಸ್​ನಿಂದ ಎಲ್ಲರಿಗೂ ತೊಂದರೆ: ವಿದಾಯದ ಭಾಷಣ ಮಾಡಿದ ಟ್ರಂಪ್​

By

Published : Jan 20, 2021, 4:44 AM IST

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅಧಿಕಾರ ಅವಧಿ ಮುಕ್ತಾಯಗೊಂಡಿದ್ದು, ಇದೀಗ ವಿದಾಯದ ಭಾಷಣ ಮಾಡಿದ್ದಾರೆ.

US President Donald Trump
US President Donald Trump

ವಾಷಿಂಗ್ಟನ್​:ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿದಾಯದ ಭಾಷಣ ಮಾಡಿದ್ದು, ಮುಂದಿನ ಸರ್ಕಾರಕ್ಕೆ ಶುಭಾಶಯ ತಿಳಿಸಿದ್ದು, ಉತ್ತಮ ಆಡಳಿತ ನೀಡುವಂತೆ ಸಲಹೆ ನೀಡಿದ್ದಾರೆ.

ಓದಿ: ಯುಎಸ್​ ಅಧ್ಯಕ್ಷರಾಗಿ ಬೈಡನ್​ ಇಂದು ಪ್ರಮಾಣ: ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್​ ಪದಗ್ರಹಣ!

19 ನಿಮಿಷಗಳ ವಿಡಿಯೋದಲ್ಲಿ ಯುಎಸ್ ಕ್ಯಾಪಿಟಲ್​ ಮೇಲಿನ ದಾಳಿ ಹಾಗೂ ಚೀನಾ ಕೊರೊನಾ ವೈರಸ್ ವಿರುದ್ಧ ವಾಗ್ದಾಳಿ ನಡೆಸಿದರು. 45ನೇ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಾನು ಅನೇಕ ಅಭಿವೃದ್ಧಿ ಪರ ಕೆಲಸಗಳನ್ನ ಮಾಡಿದ್ದು, ಅದಕ್ಕಾಗಿ ಸಹಕಾರ ನೀಡಿರುವ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ವಿದಾಯದ ಭಾಷಣ ಮಾಡಿದ ಟ್ರಂಪ್​

ನನ್ನ ಕಾಲಾವಧಿಯಲ್ಲಿ ದೇಶದ ಆರ್ಥಿಕತೆ ಉನ್ನತ ಮಟ್ಟದಲ್ಲಿತ್ತು ಎಂದಿರುವ ಟ್ರಂಪ್​, ನನ್ನ ಅವಧಿಯಲ್ಲಿ ಯಾವುದೇ ಯುದ್ಧಕ್ಕೆ ಹಾದಿ ಮಾಡಿಕೊಟ್ಟಿಲ್ಲ ಎಂದು ತಿಳಿಸಿದ್ದಾರೆ. ಚೀನಾದ ಮೇಲೆ ಐತಿಹಾಸಿಕ ಸುಂಕ ವಿಧಿಸಿದ್ದು, ಇದೇ ವಿಷಯವಾಗಿ ಹೊಸ ಒಪ್ಪಂದ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ನಾವು ಮಾತ್ರವಲ್ಲದೇ ಇಡೀ ವಿಶ್ವವೇ ಚೀನಾ ವೈರಸ್​ನಿಂದ ತೊಂದರೆಗೊಳಗಾಗುವಂತೆ ಆಯಿತು. ಹೀಗಾಗಿ ವ್ಯಾಪಾರ ಸಂಬಂಧ ಬದಲಾಯಿತು ಎಂದರು. ಅಮೆರಿಕ ಪಾರ್ಲಿಮೆಂಟರಿ ಮೇಲೆ ನಡೆದಿರುವ ದಾಳಿ ಖಂಡಿಸಿರುವ ಟ್ರಂಪ್​,​ಈ ದಾಳಿಯಿಂದಾಗಿ ಎಲ್ಲ ಅಮೆರಿಕನ್ನರು ಗಾಬರಿಗೊಂಡಿದ್ದಾರೆ. ರಾಜಕೀಯ ಹಿಂಸಾಚಾರ ಅಮೆರಿಕನ್ನರ ಮೇಲೆ ಆಕ್ರಮಣವಾಗಿದೆ ಎದನ್ನ ಎಂದಿಗೂ ಸಹಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಹೊಸದಾಗಿ ಅಧಿಕಾರಕ್ಕೆ ಬರುತ್ತಿರುವ ಸರ್ಕಾರ ಅಮೆರಿಕನ್ನರ ಆಸೆಗಳನ್ನು ಗಮನದಲ್ಲಿಟ್ಟುಕೊಂಡು ಉತ್ತಮವಾಗಿ ಕೆಲಸ ಮಾಡುವತ್ತ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಕಿವಿಮಾತು ಹೇಳಿದ್ದಾರೆ.

ABOUT THE AUTHOR

...view details