ಕರ್ನಾಟಕ

karnataka

ETV Bharat / international

ಕೊರೊನಾ ಭೀತಿ: ಎಎಸ್​ಇಎಎನ್​ ಸಭೆ ಮುಂದೂಡಿದ ಅಮೆರಿಕ - ಆಗ್ನೇಯ ಏಷ್ಯಾದ ರಾಷ್ಟ್ರಗಳ ಸಭೆ

ಕೊರೊನಾ ಭೀತಿ ಹಿನ್ನೆಲೆ ಮಾರ್ಚ್ 14 ರಂದು ನಡೆಯಬೇಕಿದ್ದ ಆಗ್ನೇಯ ಏಷ್ಯಾದ ರಾಷ್ಟ್ರಗಳ ನಾಯಕರೊಂದಿಗಿನ ಸಭೆಯನ್ನು ಮುಂದೂಡಲು ಅಮೆರಿಕ ನಿರ್ಧರಿಸಿದೆ ಎಂದು ಯು.ಎಸ್. ಅಧಿಕಾರಿಗಳು ಶುಕ್ರವಾರ ತಿಳಿದ್ದಾರೆ.

US postpones summit with ASEAN leaders amid coronavirus fears
ಕೊರೊನಾ ಭೀತಿ: ಎಎಸ್​ಇಎಎನ್​ ಸಭೆ ಮುಂದೂಡಿದ ಅಮೆರಿಕಾ

By

Published : Feb 29, 2020, 3:35 PM IST

ವಾಷಿಂಗ್ಟನ್​​ (ಅಮೆರಿಕ): ಕೊರೊನಾ ಭೀತಿ ಹಿನ್ನೆಲೆ ಮಾರ್ಚ್ 14 ರಂದು ನಡೆಯಬೇಕಿದ್ದ ಆಗ್ನೇಯ ಏಷ್ಯಾದ ರಾಷ್ಟ್ರಗಳ ನಾಯಕರೊಂದಿಗಿನ ಸಭೆಯನ್ನು ಮುಂದೂಡಲು ಅಮೆರಿಕ ನಿರ್ಧರಿಸಿದೆ ಎಂದು ಯು.ಎಸ್. ಅಧಿಕಾರಿಗಳು ಶುಕ್ರವಾರ ತಿಳಿದ್ದಾರೆ.

ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನವೆಂಬರ್‌ನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಭಾಗವಹಿಸದ ಕಾರಣ ಲಾಸ್ ವೇಗಾಸ್‌ನಲ್ಲಿ 10 ಸದಸ್ಯರ ಸಂಘದ ಆಗ್ನೇಯ ಏಷ್ಯಾ ರಾಷ್ಟ್ರಗಳ (ಆಸಿಯಾನ್) ನಾಯಕರನ್ನು ಭೇಟಿಗೆ ಆಹ್ವಾನಿಸಿದ್ದರು. ಆದರೆ, ಕೊರೊನಾ ವೈರಸ್​ ಭೀತಿ ಹಿನ್ನೆಲೆಯನ್ನ ಸಭೆಯನ್ನು ಮುಂದೂಡಲಾಗಿದೆ.

" ದೇಶಗಳೆಲ್ಲವೂ ಒಗ್ಗೂಡಿ ಕೊರೊನಾ ವೈರಸ್ ನಿವಾರಣೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ, ಯು.ಎಸ್​, ಎಎಸ್​ಇಎಎನ್​ ಪಾಲುದಾರರೊಂದಿಗೆ ಸಮಾಲೋಚಿಸಿ, ಎಎಸ್​ಇಎಎನ್​ ನಾಯಕರ ಸಭೆಯನ್ನು ಮುಂದೂಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ" ಎಂದು ಹಿರಿಯ ಆಡಳಿತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಎಸ್​ಇಎಎನ್​ ಸದಸ್ಯ ರಾಷ್ಟ್ರಗಳೊಂದಿಗಿನ ತನ್ನ ಸಂಬಂಧವನ್ನು ಅಮೆರಿಕ ಗೌರವಿಸುತ್ತದೆ ಮತ್ತು ಭವಿಷ್ಯದಲ್ಲಿ ಸಭೆಗಳನ್ನು ಎದುರು ನೋಡುತ್ತಿದೆ ಎಂದು ಇದೇ ವೇಳೆ ಅಧಿಕಾರಿ ಹೇಳಿದರು.

ABOUT THE AUTHOR

...view details