ವಾಷಿಂಗ್ಟನ್ ಡಿಸಿ: ವಾಲ್ ಸ್ಟ್ರೀಟ್ ಜರ್ನಲ್ ವರದಿಗಾರ ಡೇನಿಯಲ್ ಪರ್ಲ್ ಅವರ ಕೊಲೆಗಾರ ಅಹ್ಮದ್ ಒಮರ್ ಸಯೀದ್ ಶೇಖ್ರನ್ನು ಖುಲಾಸೆಗೊಳಿಸುವಂತೆ ಪಾಕಿಸ್ತಾನದ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಈ ಬಗ್ಗೆ ಅಮೆರಿಕ ಆಕ್ರೋಶ ವ್ಯಕ್ತಪಡಿಸಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿಗಾರ ಡೇನಿಯಲ್ ಪರ್ಲ್ ಅವರ ಅಪಹರಣ ಮತ್ತು ಕ್ರೂರ ಹತ್ಯೆಗೆ ಕಾರಣರಾದವರನ್ನು ಖುಲಾಸೆಗೊಳಿಸುವಂತೆ ಪಾಕಿಸ್ತಾನದ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈ ತೀರ್ಪಿನಿಂದ ಅಮೆರಿಕ ಆಕ್ರೋಶಗೊಂಡಿದೆ. ಅಲ್ಲದೇ ಇದು ವಿಶ್ವಕ್ಕೆ ಮಾಡಿದ ಅಗೌರವ ಎಂದು ಸಾಕಿ ಸುದ್ದಿಗಾರರಿಗೆ ಹೇಳಿದ್ದಾರೆ.
ಓದಿ:ಪಾಕಿಸ್ತಾನದಾದ್ಯಂತ ಮುಂದಿನ ವಾರದಿಂದ ಕೊರೊನಾ ವ್ಯಾಕ್ಸಿನೇಷನ್
ಭಯೋತ್ಪಾದಕರನ್ನು ಶಿಕ್ಷೆಯಿಂದ ಮುಕ್ತಗೊಳಿಸಿ, ಬಿಡುಗಡೆ ಮಾಡುವ ಪಾಕಿಸ್ತಾನದ ಈ ನಿರ್ಧಾರವು ಸಾಕಷ್ಟು ಅಪರಾಧವಾಗಿದೆ. ಅಮೆರಿಕದ ನಾಗರಿಕ ಮತ್ತು ಪತ್ರಕರ್ತನ ಕ್ರೂರ ಹತ್ಯೆಗೆ ಸಂಬಂಧಿಸಿದಂತೆ ಶೇಖ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಯುನೈಟೆಡ್ ಸ್ಟೇಟ್ಸ್ಗೆ ಅವಕಾಶ ನೀಡುವುದು ಸೇರಿದಂತೆ ಅದರ ಕಾನೂನು ಆಯ್ಕೆಗಳನ್ನು ತ್ವರಿತವಾಗಿ ಪರಿಶೀಲಿಸುವಂತೆ ನಾವು ಪಾಕಿಸ್ತಾನ ಸರ್ಕಾರವನ್ನು ಕೋರುತ್ತೇವೆ ಎಂದು ಅವರು ಇದೇ ವೇಳೆ ಹೇಳಿದರು.
ಡೇನಿಯಲ್ ಪರ್ಲ್ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಲು ಮತ್ತು ಭಯೋತ್ಪಾದಕರನ್ನು ಅವರ ಘೋರ ಅಪರಾಧಗಳಿಗೆ ಎಲ್ಲಿಯಾದರೂ ಹೊಣೆಗಾರರನ್ನಾಗಿ ಮಾಡಲು ವಾಷಿಂಗ್ಟನ್ ಬದ್ಧವಾಗಿದೆ ಎಂದು ಅವರು ಹೇಳಿದರು.