ಕರ್ನಾಟಕ

karnataka

ETV Bharat / international

ಉಕ್ರೇನ್ ವಿಮಾನ ದುರಂತದ 176 ಜನರ ಸಾವಿಗೆ ಇರಾನ್​ ಕಾರಣವೆಂದ ಅಮೆರಿಕ

ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಈ ವೇಳೆ ಇರಾನ್‌ನ ಒಂದು ಕ್ಷಿಪಣಿ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಿದೆ ಎಂದು ಅಮೆರಿಕ ಆಪಾದಿಸಿದೆ. ಅಮೆರಿಕದ ಈ ಆರೋಪವನ್ನು ಇರಾನ್​ ತಳ್ಳಿ ಹಾಕಿದ್ದು, 'ವಿಮಾನ ಪತನಕ್ಕೂ ತನಗೂ ಯಾವುದೇ ಸಂಬಂಧವಿಲ್ಲ' ಎಂದು ಸ್ಪಷ್ಟಪಡಿಸಿದೆ.

ukraine plane crash
ಉಕ್ರೇನ್ ವಿಮಾನ ದುರಂತ

By

Published : Jan 10, 2020, 4:40 AM IST

ವಾಷಿಂಗ್ಟನ್​:ಟೆಹ್ರಾನ್​ನ ಇಮಾಮ್​ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಉಕ್ರೇನ್​ ವಿಮಾನ ಪತನಗೊಂಡು 176 ಜನರು ಸಾವನ್ನಪ್ಪಿದ್ದರು. 'ಇದು ಇರಾನ್​ ಕೃತ್ಯ'ವೆಂದು ಅಮೆರಿಕ ದೂರಿದೆ.

ಟೆಹ್ರಾನ್​ನಲ್ಲಿ ಪತನಗೊಂಡ ಉಕ್ರೇನ್​ ವಿಮಾನವನ್ನು ಇರಾನ್​ ಕ್ಷಿಪಣಿ ಹೊಡೆದುರುಳಿಸಿದೆ. ಇರಾನ್​ ತನ್ನ ಗುರಿ ತಪ್ಪಿ ಪ್ರಯಾಣಿಕ ವಿಮಾನ ಹೊಡೆದುರುಳಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಗಂಭೀರವಾದ ಆಪಾದನೆ ಮಾಡಿದ್ದಾರೆ.

ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಈ ವೇಳೆ ಇರಾನ್‌ನ ಒಂದು ಕ್ಷಿಪಣಿ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಿದೆ ಎಂದು ಆಪಾದಿಸಿದೆ. ಅಮೆರಿಕದ ಈ ಆರೋಪವನ್ನು ಇರಾನ್​ ತಳ್ಳಿ ಹಾಕಿದ್ದು, 'ವಿಮಾನ ಪತನಕ್ಕೂ ತನಗೂ ಯಾವುದೇ ಸಂಬಂಧವಿಲ್ಲ' ಎಂದು ಸ್ಪಷ್ಟಪಡಿಸಿದೆ.

ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬುಧವಾರ ಬೆಳಿಗ್ಗೆ ಬೋಯಿಂಗ್ 737-800 ವಿಮಾನ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಎಲ್ಲ 176 ಜನರು ಮೃತಪಟ್ಟಿದ್ದರು.

ABOUT THE AUTHOR

...view details