ಕರ್ನಾಟಕ

karnataka

ETV Bharat / international

ಭಯೋತ್ಪಾದಕ ಪಟ್ಟಿಯಿಂದ ಸುಡಾನ್​ ತೆಗೆದುಹಾಕಲು ಯುಎಸ್​ನ ಒಪ್ಪಿಗೆ - ಯುಎಸ್​ನ ವಿದೇಶಾಂಗ ಕಾರ್ಯದರ್ಶಿ

ಭಯೋತ್ಪಾದಕ ಪಟ್ಟಿಯಿಂದ ಸುಡಾನ್​ನನ್ನು ಅಧಿಕೃತವಾಗಿ ತೆಗೆದುಹಾಕುವ ಅಧಿಸೂಚನೆಗೆ ಯುಎಸ್​ನ ವಿದೇಶಾಂಗ ಕಾರ್ಯದರ್ಶಿ ಮೈಕಲ್​ ಪೊಂಪಿಯೊ ಸಹಿ ಹಾಕಿದ್ದಾರೆ.

ಯುಎಸ್​ನ ವಿದೇಶಾಂಗ ಕಾರ್ಯದರ್ಶಿ ಮೈಕಲ್​ ಪೊಂಪಿಯೊ
ಯುಎಸ್​ನ ವಿದೇಶಾಂಗ ಕಾರ್ಯದರ್ಶಿ ಮೈಕಲ್​ ಪೊಂಪಿಯೊ

By

Published : Dec 14, 2020, 3:39 PM IST

Updated : Dec 14, 2020, 3:48 PM IST

ಖಾರ್ಟೌಮ್: ಸುಡಾನ್​ನನ್ನು ಭಯೋತ್ಪಾದನೆ ಪಟ್ಟಿಯಿಂದ ತೆಗೆದುಹಾಕುವ ಅಧಿಸೂಚನೆಗೆ ಯುಎಸ್​ನ ವಿದೇಶಾಂಗ ಕಾರ್ಯದರ್ಶಿ ಮೈಕಲ್​ ಪೊಂಪಿಯೊ ಸಹಿ ಹಾಕಿದ್ದಾರೆ ಎಂದು ಖಾರ್ಟೌಮ್​​ನಲ್ಲಿರುವ ಯುಎಸ್ ರಾಯಭಾರ ಕಚೇರಿ ಸೋಮವಾರ ತಿಳಿಸಿದೆ.

"45 ದಿನಗಳ ಕಾಂಗ್ರೆಶನಲ್​​ ಅಧಿಸೂಚನೆ ಅವಧಿ ಮುಗಿದಿದೆ. ಸುಡಾನ್​ಅನ್ನು ರಾಜ್ಯ ಪ್ರಾಯೋಜಕ ಭಯೋತ್ಪಾದಕ ಪಟ್ಟಿಯಿಂದ ತೆಗೆಯುವ ಅಧಿಸೂಚನೆಗೆ ಇಂದು (ಡಿಸೆಂಬರ್ 14) ರಂದು ರಾಜ್ಯ ಕಾರ್ಯದರ್ಶಿ ಸಹಿ ಹಾಕಿದ್ದಾರೆ" ಎಂದು ಖಾರ್ಟೌಮ್​ನಲ್ಲಿರುವ ಯುಎಸ್ ರಾಯಭಾರ ಕಚೇರಿ ಹೇಳಿದೆ.

ಇದನ್ನು ಓದಿ:ಸಮನ್ವಯಕಾರ​ ಹುದ್ದೆ ತೆಗೆದುಹಾಕಲು ಎಐಕೆಎಸ್‌ಸಿಸಿ ನಿರ್ಧಾರ

ಈ ಹಿಂದೆ ಯುಎಸ್​​ನಲ್ಲಿ ದಾಳಿ ಮಾಡಲಾಗಿದ್ದು, ಇಲ್ಲಿನ ಸಂತ್ರಸ್ತರಿಗೆ ಸುಡಾನ್ ತನ್ನ ರಾಜ್ಯ ಪ್ರಾಯೋಜಕರ ಭಯೋತ್ಪಾದನೆ ಪಟ್ಟಿಯಿಂದ 335 ಮಿಲಿಯನ್ ಡಾಲರ್​ನನ್ನು ಪಾವತಿಸಿದ ನಂತರ ಅದನ್ನು ಈ ಪಟ್ಟಿಯಿಂದ ತೆಗೆದುಹಾಕಲಾಗುವುದು ಎಂದು ಅಕ್ಟೋಬರ್​​ನಲ್ಲಿ ಘೋಷಿಸಲಾಗಿತ್ತು.

ಅನಾಡೋಲು ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಈ ಹೇಳಿಕೆಯೂ ಸುಡಾನ್​ನಲ್ಲಿ ಭಾರಿ ಬದಲಾವಣೆಯನ್ನು ತಂದಿದ್ದು, ಮಾಜಿ ನಾಯಕ ಒಮರ್ ಅಲ್-ಬಶೀರ್ ಅವರನ್ನು 2019 ರಲ್ಲಿ ಉಚ್ಚಾಟನೆ ಮಾಡಲು ಕಾರಣವಾಯಿತು. ಅಲ್ಲದೇ ಬಳಿಕ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಮಹತ್ತರ ಬದಲಾವಣೆಗಳು ಆದವು.

Last Updated : Dec 14, 2020, 3:48 PM IST

ABOUT THE AUTHOR

...view details