ಸಿಯಾಟಲ್ :ಅಮೆರಿಕದಲ್ಲಿ ಕಪ್ಪುವರ್ಣೀಯರ ವಿರುದ್ಧ ದೌರ್ಜನ್ಯಗಳು ಮುಂದುವರಿಯುತ್ತಲೇ ಇವೆ. ವಾಷಿಂಗ್ಟನ್ನ ಅಟಾರ್ನಿ ಜನರಲ್ ಹಾಗೂ ಇಬ್ಬರು ಟಕೋಮಾ ಪೊಲೀಸ್ ಅಧಿಕಾರಿಗಳು ಕಪ್ಪು ವರ್ಣೀಯ ವ್ಯಕ್ತಿಯನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಟಾರ್ನಿ ಜನರಲ್ ಬಾಬ್ ಫರ್ಗುಸನ್ ಕ್ರಿಸ್ಟೋಫರ್ ಬರ್ಬ್ಯಾಂಕ್, ಮ್ಯಾಥ್ಯೂ ಕಾಲಿನ್ಸ್ ಮತ್ತು ತಿಮೋತಿ ರಾಂಕಿನ್ ವಿರುದ್ಧ ದೂರುಗಳು ಕೇಳಿ ಬಂದಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಫರ್ಗುಸನ್ ಕಚೇರಿ ತಿಳಿಸಿದೆ.
ಪಿಯರ್ಸ್ ಕೌಂಟಿ ಸುಪೀರಿಯರ್ ಕೋರ್ಟ್‌ನಲ್ಲಿ ಸಲ್ಲಿಸಲಾದ ವರದಿ ಪ್ರಕಾರ, ಬಿಳಿಯರಾದ ಬರ್ಬ್ಯಾಂಕ್ ಮತ್ತು ಕಾಲಿನ್ಸ್ ಸೇರಿ ಮೂವರು ಯಾವುದೇ ಕಾರಣವಿಲ್ಲದೆ ಎಲ್ಲಿಸ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.