ವಾಷಿಂಗ್ಟನ್:ವೇಗವಾಗಿ ಹರಡುತ್ತಿರುವಕೊರೋನಾದಿಂದ ಸಂಕಷ್ಟಕ್ಕೀಡಾಗಿರುವ ಚೀನಾಗೆ ಅಮೆರಿಕಾ ರೋಗ ನಿಯಂತ್ರಣಕ್ಕಾಗಿ ನೆರವಿನ ಹಸ್ತ ಚಾಚಿದ್ದು, 100 ಮಿಲಿಯನ್ ಯುಎಸ್ ಡಾಲರ್ ನೀಡಿದೆ.
ಕೊರೋನಾ ವಿರುದ್ಧ ಸಮರಕ್ಕೆ ಅಮೆರಿಕಾ ಸಹಾಯ... ಚೀನಾಗೆ 100 ಮಿಲಿಯನ್ ಡಾಲರ್ ನೀಡಿದ ಯುಎಸ್ - US offers USD 100 mln to China
ಕೊರೋನಾ ವೈರಸ್ನಿಂದ ಪೀಡಿತವಾಗಿರುವ ಚೀನಾ ಮತ್ತು ಇತರೆ ಸೋಂಕು ಪೀಡಿತ ದೇಶಗಳಿಗೆ ರೋಗದ ನಿಯಂತ್ರಣಕ್ಕಾಗಿ ಅಮೆರಿಕಾ 100 ಮಿಲಿಯನ್ ಯುಎಸ್ ಡಾಲರ್ ನೀಡಿದೆ.
ಅಮೆರಿಕಾ ಖಾಸಗಿ ಕ್ಷೇತ್ರದ ಸಹಯೋಗದೊಂದಿಗೆ ನೂರಾರು ಮಿಲಿಯನ್ ಡಾಲರ್ ದಾನ ಮಾಡಿದ್ದು, ಯುಎಸ್ನ ನಾಯಕತ್ವದ ಪ್ರಭಾವ ಎಂತಹದ್ದು ಎಂಬುದನ್ನು ತೋರಿಸುತ್ತದೆಯೆಂದು ಎಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿಕೆ ನೀಡಿದ್ದಾರೆ.ನಮ್ಮ ಬದ್ಧತೆಗೆ ಸರಿ ಸಮಾನವಾಗಿ ನಿಲ್ಲುವಂತೆ ಇತರ ರಾಷ್ಟ್ರಗಳಿಗೆ ನಾವು ಉತ್ತೇಜನ ನೀಡುತ್ತೇವೆ. ಅಲ್ಲದೇ ತ್ವರಿತಗತಿಯಲ್ಲಿ ಹರಡುತ್ತಿರುವ ಈ ಸಾಂಕ್ರಾಮಿಕ ರೋಗ ಭಯಭೀತಿ ಸೃಷ್ಟಿಸಿದ್ದು, ಇದನ್ನು ತಡೆಯುವುದು ಮುಖ್ಯವೆಂದರು.
ಮಾಸ್ಕ್, ಗ್ಲೌಸ್, ಕೃತಕ ಉಸಿರಾಟ ಯಂತ್ರ ಸೇರಿದಂತೆ ಸುಮಾರು17.8 ಟನ್ಗಳಷ್ಟು ವೈದ್ಯಕೀಯ ಸಾಮಗ್ರಿಗಳನ್ನು ಚೀನಾಕ್ಕೆ ಅಮೆರಿಕಾ ನೀಡಿದೆ. ಈವರೆಗೆ 31,000 ಜನರು ಈ ಕೊರೋನಾ ಸೋಂಕಿಗೆ ಒಳಗಾಗಿದ್ದು, 630 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.