ಕರ್ನಾಟಕ

karnataka

ETV Bharat / international

ಜನಪ್ರಿಯ ಹಿಂದಿ ಹಾಡಿಗೆ ದನಿಗೂಡಿಸಿದ ಯುಎಸ್​ ನೇವಿ ಬ್ಯಾಂಡ್​! - ಯುಎಸ್ ನೇವಲ್ ಆಪರೇಷನ್

ಸಿಎನ್ಒ ಮೈಕೆಲ್ ಎಂ ಗಿಲ್ಡೆ ಅವರು ಭಾರತದ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅವರಿಗಾಗಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಯುಎಸ್ ನೌಕಾಪಡೆಯ ನೇವಿ ಬ್ಯಾಂಡ್ ಸದಸ್ಯರು ಜನಪ್ರಿಯ ಹಿಂದಿ ಹಾಡು ಹಾಡಿ ಎಲ್ಲರ ಮನ ಗೆದ್ದಿದ್ದಾರೆ.

US Navy
ಭಾರತದ ರಾಯಭಾರಿ ತಾರಂಜಿತ್ ಸಿಂಗ್ ಸಂಧು

By

Published : Mar 29, 2021, 6:38 AM IST

ವಾಷಿಂಗ್ಟನ್ [ಅಮೆರಿಕ]:ಯುಎಸ್​ ನೇವಲ್ ಆಪರೇಷನ್ ಮುಖ್ಯಸ್ಥ (ಸಿಎನ್ಒ) ಮೈಕೆಲ್ ಎಂ ಗಿಲ್ಡೆ ಭಾರತದ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅವರಿಗಾಗಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಯುಎಸ್ ನೌಕಾಪಡೆಯ ಸದಸ್ಯರು ಜನಪ್ರಿಯ ಹಿಂದಿ ಹಾಡು ಹಾಡಿ ಗಮನ ಸೆಳೆದರು.

ಮಾ.29ರಂದು ಟ್ವಿಟರ್​​ ಮೂಲಕ ಸಂಧು ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. "ಇದು ಸ್ನೇಹ ಬಂಧವಾಗಿದ್ದು, ಅದನ್ನು ಎಂದಿಗೂ ಮುರಿಯಲಾಗುವುದಿಲ್ಲ" ಎಂದು ಬರೆದಿದ್ದಾರೆ. ಈ ಹಾಡನ್ನು ಎ.ಆರ್ ರೆಹಮಾನ್ ಅವರು, 2004ರ ಚಲನಚಿತ್ರ ಸ್ವೇಡ್ಸ್​ಗಾಗಿ ಸಂಯೋಜಿಸಿ ಹಾಡಿದ್ದರು.

ಇದನ್ನು ಓದಿ: ಈ ಗ್ರಾಮದ ಪುರುಷರೆಲ್ಲ ಹೆಣ್ಣಾದರು: ಅರೆರೇ.. ಏನಿದು ವಿಚಿತ್ರ, ಯಾಕಿಂಗಾದ್ರು!?

1.5 ನಿಮಿಷಗಳ ವಿಡಿಯೊ ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಈ ಹಾಡು 2 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಇದನ್ನು 14.9 ಸಾವಿರ ಜನರು ಇಷ್ಟಪಟ್ಟಿದ್ದಾರೆ.

ಇನ್ನು "ನೇವಿ ಬ್ಯಾಂಡ್ 1925 ರಿಂದ ನಮ್ಮ ಪಾಲುದಾರ ರಾಷ್ಟ್ರಗಳಿಗೆ ಉತ್ತಮ ಸಂಪರ್ಕ ಕಲ್ಪಿಸುತ್ತಿದೆ. ಹ್ಯಾಪಿಹೋಲಿ" ಎಂದು ಯುಎಸ್ ನೇವಿ ಬ್ಯಾಂಡ್ ಟ್ವೀಟ್ ಮಾಡಿದೆ.

ಪ್ರತ್ಯೇಕ ಟ್ವೀಟ್‌ನಲ್ಲಿ ಸಂಧು ಅವರು "ಅದ್ಭುತ ಸಂಜೆ" ಆಯೋಜಿಸಿದ್ದಕ್ಕಾಗಿ ಯುಎಸ್ ಸಿಎನ್‌ಒ ಅಡ್ಮಿರಲ್ ಗಿಲ್ಡೆಗೆ ಧನ್ಯವಾದ ಅರ್ಪಿಸಿದ್ದಾರೆ.

ABOUT THE AUTHOR

...view details