ವಾಷಿಂಗ್ಟನ್:ಭಾರತಕ್ಕೆ ಆದ್ಯತಾ ವ್ಯಾಪಾರ ಸ್ಥಾನಮಾನವನ್ನು ಪುನಃ ನೀಡಲು ಅಮೆರಿಕ ಮುಂದಾಗಿದೆ ಎಂದು ಟ್ರಂಪ್ ಆಡಳಿತದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷ ಜೂನ್ನಲ್ಲಿ ಡೊನಾಲ್ಡ್ ಟ್ರಂಪ್ ಭಾರತಕ್ಕೆ ನೀಡಲಾಗಿದ್ದ 'ಆದ್ಯತೆಗಳ ಸಾಮಾನ್ಯೀಕೃತ ವ್ಯವಸ್ಥೆ' (ಜನರಲೈಸ್ಡ್ ಸಿಸ್ಟಂ ಆಫ್ ಪ್ರಿಫರೆನ್ಸಸ್- ಜಿಎಸ್‌ಪಿ) ಸ್ಥಾನಮಾನವನ್ನು ರದ್ದುಗೊಳಿಸಿದ್ದರು. ಇದಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ ಈ ನಿರ್ಧಾರನ್ನು ಹಿಂಪಡೆದು ಜಿಎಸ್‍ಪಿಯನ್ನು ಭಾರತಕ್ಕೆ ನೀಡಲು ದೊಡ್ಡಣ್ಣ ಚಿಂತನೆ ನಡೆಸಿದ್ದಾನೆ.