ಕರ್ನಾಟಕ

karnataka

ಮಾನವ ದೇಹದಲ್ಲಿ ಕೆಲಸ ಮಾಡುತ್ತಿದೆ ಹಂದಿಯ ಕಿಡ್ನಿ! ವೈದ್ಯಲೋಕದಲ್ಲೊಂದು ಅಚ್ಚರಿಯ ಶಸ್ತ್ರಚಿಕಿತ್ಸೆ

By

Published : Oct 21, 2021, 9:54 AM IST

ಈ ಅಪರೂಪದ ಶಸ್ತ್ರಚಿಕಿತ್ಸೆಯು ತಳಿ ಪರಿವರ್ತಿತ ಪ್ರಾಣಿ ಹಾಗು ಮಿದುಳು ನಿಷ್ಕ್ರೀಯಗೊಂಡು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ನಡುವೆ ನಡೆದಿದೆ. ಈ ವಿಶೇಷವಾದ ಪ್ರಯೋಗಕ್ಕೆ ವ್ಯಕ್ತಿಯ ಸಂಬಂಧಿಕರು ಒಪ್ಪಿಗೆ ಸೂಚಿಸಿದ ಕಾರಣ ವೈದ್ಯರು ಮಹತ್ವದ ಸಾಹಸಕ್ಕೆ ಕೈ ಹಾಕಿದ್ದರು.

pig's kidney
pig's kidney

ವಾಷಿಂಗ್ಟನ್: ಅತ್ಯಂತ ಕುತೂಹಲ ಮತ್ತು ಅಚ್ಚರಿಯೆನಿಸುವ ವಿದ್ಯಮಾನದಲ್ಲಿ ಅಮೆರಿಕದ ತಜ್ಞ ವೈದ್ಯರು ಹಂದಿಯ ಕಿಡ್ನಿಯನ್ನು ಮನುಷ್ಯನಿಗೆ ತಾತ್ಕಾಲಿಕವಾಗಿ ಅಳವಡಿಸಿ ಪ್ರಯೋಗ ನಡೆಸಿದ್ದಾರೆ. ಈ ಶಸ್ತ್ರಚಿಕಿತ್ಸೆಯಿಂದ ಕಂಡುಕೊಂಡಿರುವ ಪ್ರಗತಿಯನ್ನು ಅವರು 'ಸಂಭಾವ್ಯ ಪವಾಡ'ವೆಂದೇ ಬಣ್ಣಿಸಿದ್ದಾರೆ.

ಈ ವಿಶೇಷ ಶಸ್ತ್ರಚಿಕಿತ್ಸೆಯು ಸೆಪ್ಟೆಂಬರ್ 25ರಂದು ನಡೆದಿದ್ದು, ತಳಿ ಪರಿವರ್ತಿತ ಪ್ರಾಣಿ ಹಾಗು ಮಿದುಳು ನಿಷ್ಕ್ರೀಯಗೊಂಡು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ನಡುವೆ ನಡೆದಿದೆ. ಈ ವಿಶೇಷವಾದ ಪ್ರಯೋಗಕ್ಕೆ ವ್ಯಕ್ತಿಯ ಸಂಬಂಧಿಕರು ಒಪ್ಪಿಗೆ ಸೂಚಿಸಿದ್ದು, ವೈದ್ಯರು ಅಪರೂಪದ ಪ್ರಯತ್ನಕ್ಕೆ ಕೈಹಾಕಿದ್ದರು. ವೈದ್ಯಕೀಯ ವಿಜ್ಞಾನದಲ್ಲಿ ಮಹತ್ವದ ಸಂಶೋಧನೆ ಮಾಡುವ ನಿಟ್ಟಿನಲ್ಲಿ ಎರಡು ದಿನಗಳ ಕಾಲ ಪ್ರಯೋಗಾತ್ಮಕ ಶಸ್ತ್ರಚಿಕಿತ್ಸೆ ನಡೆದಿದೆ.

'ಸದ್ಯ ಈ ಕಿಡ್ನಿ, ಕಲ್ಮಶಗಳನ್ನು ತೆಗೆದುಹಾಕಿ ಮೂತ್ರ ಉತ್ಪಾದಿಸುತ್ತಿದೆ. ಹೀಗಾಗಿ ಅದು ತಾನು ಮಾಡಬೇಕಿರುವ ಕೆಲಸ ಮಾಡುತ್ತಿದೆ' ಎಂದು ನ್ಯೂಯಾರ್ಕ್ ಯೂನಿವರ್ಸಿಟಿಯ ಅಂಗಾಂಗ ಕಸಿ ಸಂಸ್ಥೆಯ ನಿರ್ದೇಶಕ ರಾಬರ್ಟ್‌ ಮಾಂಟಗೋಮರಿ ಎಎಫ್‌ಪಿ ಸುದ್ದಿಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ವೈದ್ಯ ಮಾಂಟ್‌ಗೋಮರಿ ಅವರು ತಮ್ಮ ಸಹೋದ್ಯೋಗಿಗಳ ಜೊತೆ ಸೇರಿ ಸುಮಾರು ಎರಡು ಗಂಟೆಗಳ ಕಾಲವಧಿಯಲ್ಲಿ ಈ ಶಸ್ತ್ರಕ್ರಿಯೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಿಡ್ನಿಯನ್ನು ರೋಗಿಯ ಕಾಲಿನ ಮೇಲ್ಭಾಗದಲ್ಲಿರುವ ರಕ್ತನಾಳಗಳಿಗೆ ಜೋಡಿಸಿದ್ದಾರೆ. ಇದು ವೈದ್ಯರಿಗೆ ಬಯೋಪ್ಸಿ ಸ್ಯಾಂಪಲ್‌ಗಳನ್ನು ಗಮನಿಸಲು ಅನುಕೂಲವಾಯಿತು.

ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ

ಈ ಹಿಂದೆ ನಡೆದ ಸಂಶೋಧನೆಗಳ ಪ್ರಕಾರ, ಹಂದಿಯ ಕಿಡ್ನಿ ಮಾನವೇತರ ಪ್ರಾಣಿಗಳಲ್ಲಿ ಒಂದು ವರ್ಷದವರೆಗೆ ಉಳಿಯಬಲ್ಲ ಸಾಮರ್ಥ್ಯ ಹೊಂದಿದೆ ಎಂದು ತಿಳಿದುಬಂದಿತ್ತು. ಆದ್ರೆ ಇದೇ ಮೊದಲ ಬಾರಿಗೆ ಹಂದಿಯ ಕಿಡ್ನಿಯನ್ನು ಮನುಷ್ಯನಿಗ ಜೋಡಿಸುವ ಕಾರ್ಯ ನಡೆದಿದೆ.

ABOUT THE AUTHOR

...view details