ಕರ್ನಾಟಕ

karnataka

ETV Bharat / international

ಟ್ರಂಪ್​ಗೆ​ ದೊಡ್ಡ ಹಿನ್ನಡೆ: ಕೊರೊನಾ ವೈರಸ್​ ಮಾನವ ಸೃಷ್ಟಿಯಲ್ಲ- ಗುಪ್ತಚರ ಏಜೆನ್ಸಿ

ಇತ್ತೀಚಿನ ದಿನಗಳಲ್ಲಿ ಡೊನಾಲ್ಡ್​ ಟ್ರಂಪ್, ಚೀನಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ನಾಲಗೆ ಹರಿಬಿಡುತ್ತಿದ್ದಾರೆ. 'ಕೋವಿಡ್-19 ಹಬ್ಬಿಸಿ, ಆರಂಭದಲ್ಲಿ ಅದರ ಬಗ್ಗೆ ಎಲ್ಲವೂ ತಿಳಿದಿದ್ದರೂ ಮಾಹಿತಿ ನೀಡಲಿಲ್ಲ. ತ್ವರಿತವಾಗಿ ಕಾರ್ಯಪ್ರವೃತವಾಗುವಲ್ಲಿ ಚೀನಾ ವಿಫಲವಾಗಿದೆ' ಎಂದು ಆರೋಪಿಸಿದ್ದರು. ಆದರೆ, ತನ್ನದೇ ದೇಶದ ಗುಪ್ತಚರ ಏಜೆನ್ಸಿಯು ವೈರಸ್ ಮೂಲದ ಬಗ್ಗೆ ವ್ಯತಿರಿಕ್ತವಾದ ಹೇಳಿಕೆ ನೀಡಿದೆ. ಇದು ಟ್ರಂಪ್​ಗೆ ತೀವ್ರ ಹಿನ್ನಡೆ ಆದಂತಿದೆ.

President Donald Trum
ಅಧ್ಯಕ್ಷ ಡೊನಾಲ್ಡ್ ಟ್ರಂಪ್

By

Published : Apr 30, 2020, 11:11 PM IST

ವಾಷಿಂಗ್ಟನ್: ನೊವೆಲ್​ ಕೊರೊನಾ ವೈರಸ್​ "ಮಾನವ ನಿರ್ಮಿತವಲ್ಲ ಅಥವಾ ಆನುವಂಶಿಕವಾಗಿ ಮಾರ್ಪಡಿಸಲಾದ ಸೋಂಕಲ್ಲ'' ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಆರಂಭಿಕ ಅಭಿಪ್ರಾಯ ವ್ಯಕ್ತಪಡಿಸಿವೆ.

ಈ ವೈರಸ್ ಸೋಂಕು ಸೋಂಕಿತ ಪ್ರಾಣಿಗಳ ಸಂಪರ್ಕದಿಂದ ಅಥವಾ ಚೀನಾದ ಪ್ರಯೋಗಾಲಯದಲ್ಲಿ ಆಕಸ್ಮಿಕವಾಗಿ ಏನಾದರೂ ಅಪಘಾತ ಸಂಭವಿಸಿ ಸೃಷ್ಟಿಯಾಯಿತೇ ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿ ಹೇಳಿದೆ.

ನ್ಯಾಷನಲ್ ಇಂಟೆಲಿಜೆನ್ಸ್​ನ ನಿರ್ದೇಶಕ ಕಚೇರಿಯಿಂದ ಅಮೆರಿಕ ಗೂಢಚರ ಏಜೆನ್ಸಿ ಈ ಹೇಳಿಕೆ ಪ್ರಕಟಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಡಿ ಬರುತ್ತದೆ. ಚೀನಾದ ಹೃದಯ ಭಾಗದಲ್ಲಿರುವ ವುಹಾನ್​ನಲ್ಲಿ ಸಾಂಕ್ರಾಮಿಕ ರೋಗ ಹುಟ್ಟಿಕೊಂಡು ವಿಶ್ವಾದ್ಯಂತ 2,20,000ಕ್ಕಿಂತ ಅಧಿಕ ಜನರನ್ನು ಬಲಿ ತೆಗೆದುಕೊಂಡಿದೆ. ಇದು ಇಲ್ಲಿನ ಲ್ಯಾಬ್​ನಲ್ಲೇ ಸೃಷ್ಟಿ ಆಯಿತು ಎಂಬುದು ಇದುವರೆಗೂ ಸಾಬೀತಾಗಿಲ್ಲ.

ಇತ್ತೀಚಿನ ದಿನಗಳಲ್ಲಿ ಡೊನಾಲ್ಡ್​ ಟ್ರಂಪ್, ಚೀನಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ನಾಲಿಗೆ ಹರಿಬಿಡುತ್ತಿದ್ದಾರೆ. ಭೌಗೋಳಿಕ ರಾಜಕೀಯದಿಂದ ಹಿಡಿದು ವ್ಯಾಪಾರ ಪಾಲುದಾರಿಕೆಯವರೆಗೂ ಡ್ರ್ಯಾಗನ್​ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. 'ಕೋವಿಡ್-19 ಹಬ್ಬಿಸಿ, ಆರಂಭದಲ್ಲಿ ಅದರ ಬಗ್ಗೆ ಎಲ್ಲವೂ ತಿಳಿದಿದ್ದರೂ ಮಾಹಿತಿ ನೀಡಲಿಲ್ಲ. ತ್ವರಿತವಾಗಿ ಕಾರ್ಯಪ್ರವೃತವಾಗುವಲ್ಲಿ ಚೀನಾ ವಿಫಲವಾಗಿದೆ' ಎಂದು ಆರೋಪಿಸಿದ್ದರು.

ಕೋವಿಡ್-19 ವೈರಸ್ ಮಾನವ ನಿರ್ಮಿತವಲ್ಲ ಅಥವಾ ಅನುವಂಶಿಕವಾಗಿ ಮಾರ್ಪಡಲಿಲ್ಲ ಎಂಬ ವ್ಯಾಪಕವಾದ ವೈಜ್ಞಾನಿಕ ಒಮ್ಮತಾಭಿಪ್ರಾಯ ಗುಪ್ತಚರ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂಬ ಹೇಳಿಕೆ ಹೊರಬಿದ್ದಿದೆ.

ಈ ಸೋಂಕು, ಸೋಂಕಿತ ಪ್ರಾಣಿಗಳ ಸಂಪರ್ಕದ ಮೂಲಕ ಬಂದಿದೆಯಾ ಅಥವಾ ವುಹಾನ್​ನ ಪ್ರಯೋಗಾಲಯದಲ್ಲಿ ಸಂಭವಿಸಿದ ಅಪಘಾತದ ಪರಿಣಾಮವೋ ಎಂಬುದನ್ನು ನಿರ್ಧರಿಸಲು ಪರಿಶೀಲನೆ ನಡೆಸಬೇಕಿದೆ. ಹೊರಹೊಮ್ಮುತ್ತಿರುವ ಮಾಹಿತಿ ಮತ್ತು ಸವಾಲುಗಳನ್ನು ಗುಪ್ತಚರ ತಂಡ ಕಠಿಣವಾಗಿ ಪರಿಶೀಲಿಸುವುದನ್ನು ಮುಂದುವರೆಸುತ್ತದೆ ಎಂದೂ ಹೇಳಿದೆ.

ABOUT THE AUTHOR

...view details