ಕರ್ನಾಟಕ

karnataka

ETV Bharat / international

US inflation: ನಾಲ್ಕು ದಶಕಗಳ ನಂತರ ದಾಖಲೆಯ ಹಣದುಬ್ಬರಕ್ಕೆ ಒಳಗಾದ ಅಮೆರಿಕ! - ಅಮೆರಿಕದಲ್ಲಿ ಬೆಲೆ ಹೆಚ್ಚಳ

ಕೋವಿಡ್​ ರೂಪಾಂತರವಾದ ಒಮಿಕ್ರಾನ್ ಕಾರ್ಮಿಕರ ಪೂರೈಕೆ ಕಡಿಮೆ ಮಾಡಿದೆ. ಇದರಿಂದ ಕಾರ್ಮಿಕರು ಅವಶ್ಯಕ ಉದ್ದಿಮೆ ಅಥವಾ ವಲಯಗಳಲ್ಲಿ ಕಾರ್ಮಿಕರು ಸಿಗುತ್ತಿಲ್ಲ. ಇದರಿಂದಾಗಿ ಉತ್ಪಾದನೆ ಕಡಿಮೆಯಾಗುತ್ತಿದ್ದು, ಬೆಲೆ ಹೆಚ್ಚಾಗುತ್ತಿದೆ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

us-inflation-up-7-percent-in-past-year-most-since-1982
US inflation: ನಾಲ್ಕು ದಶಕಗಳ ನಂತರ ದಾಖಲೆಯ ಹಣದುಬ್ಬರಕ್ಕೆ ಒಳಗಾದ ಅಮೆರಿಕ!

By

Published : Jan 13, 2022, 9:16 AM IST

ವಾಷಿಂಗ್ಟನ್( ಅಮೆರಿಕ): ಪ್ರಸ್ತುತ ಚೀನಾ ವಿರುದ್ಧ ಸೆಣೆಸಾಟಕ್ಕೆ ಇಳಿದಿರುವ ಅಮೆರಿಕ ಈಗ ಆರ್ಥಿಕ ಹೊಡೆತಕ್ಕೆ ಸಿಲುಕಿದೆ. 2021ರಲ್ಲಿ ಗ್ರಾಹಕ ಬೆಲೆಗಳು ಏರಿಕೆಯಾದ ಕಾರಣದಿಂದ ಅಮೆರಿಕದ ಹಣದುಬ್ಬರ ನಾಲ್ಕು ದಶಕಗಳಲ್ಲೇ ಅತ್ಯಧಿಕ ಮಟ್ಟ ತಲುಪಿದೆ.

ನಿತ್ಯದ ಬಳಕೆಗೆ ಗ್ರಾಹಕರಿಗೆ ಬೇಕಾದ ಪದಾರ್ಥಗಳ ಬೆಲೆ ಹೆಚ್ಚಾಗಿರುವ ಕಾರಣದಿಂದ ಹಣದುಬ್ಬರ ಹೆಚ್ಚಾಗಿದೆ. 1981ರ ಇದೇ ಮೊದಲ ಬಾರಿಗೆ ಹಣದುಬ್ಬರ ಪ್ರಮಾಣ ಶೇಕಡಾ 7ಕ್ಕೆ ಏರಿಕೆ ಕಂಡಿದ ಎಂದು ಯುಎಸ್ ಟುಡೇ ವರದಿ ಮಾಡಿದೆ.

ಡಿಸೆಂಬರ್ ತಿಂಗಳಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸೋಲಿನ್ ಮುಂತಾದ ತೈಲ ಬೆಲೆಗಳು ಕಡಿಮೆಯಾದರೂ ಕೂಡಾ ಹಣದುಬ್ಬರ ಹೆಚ್ಚಾಗಿದ್ದು, ಮೂಲ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹೆಚ್ಚಿನ ಹಣ ಹೊಂದಿಸಬೇಕಾದ ಪರಿಸ್ಥಿತಿಯಲ್ಲಿ ಜನರಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೋವಿಡ್​ ರೂಪಾಂತರವಾದ ಒಮಿಕ್ರಾನ್ ಕಾರ್ಮಿಕರ ಪೂರೈಕೆಯನ್ನು ಕಡಿಮೆ ಮಾಡಿದೆ. ಇದರಿಂದ ಕಾರ್ಮಿಕರು ಅವಶ್ಯಕ ಉದ್ದಿಮೆ ಅಥವಾ ವಲಯಗಳಲ್ಲಿ ಕಾರ್ಮಿಕರು ಸಿಗುತ್ತಿಲ್ಲ. ಇದರಿಂದಾಗಿ ಉತ್ಪಾದನೆ ಕಡಿಮೆಯಾಗುತ್ತಿದ್ದು, ಬೆಲೆ ಹೆಚ್ಚಾಗುತ್ತಿದೆ ಎಂದು ಹಣಕಾಸು ಸೇವೆಗಳ ಕಂಪನಿಯಾದ ವೆಲ್ಸ್ ಫಾರ್ಗೋದ ಅರ್ಥಶಾಸ್ತ್ರಜ್ಞ ಸ್ಯಾಮ್ ಬುಲ್ಲಾರ್ಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಕಾರ್ಮಿಕ ಇಲಾಖೆ ಹೇಳುವ ಪ್ರಕಾರ ಆಹಾರ ಮತ್ತು ಅನಿಲ ಬೆಲೆಗಳನ್ನು ಹೊರತುಪಡಿಸಿ ಹಣದುಬ್ಬರವು ಶೇಕಡಾ 5.5ರಷ್ಟು ಏರಿಕೆ ಕಂಡಿದೆ. ಹಣದುಬ್ಬರವು ನವೆಂಬರ್‌ನಿಂದ ಒಟ್ಟಾರೆಯಾಗಿ ಶೇಕಡಾ 0.5ರಷ್ಟು ಏರಿಕೆಯಾಗಿದೆ. ಅಮೆರಿಕನ್ನರು ಈಗ ಪಡೆಯುತ್ತಿರುವ ವೇತನದಿಂದಾಗಿ ಕಡಿಮೆ ಆದಾಯದ ಕುಟುಂಬಗಳು ಮೂಲ ವೆಚ್ಚಗಳನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿಗಳು ಸ್ಪಷ್ಟಪಡಿಸಿವೆ.

ಸೆಮಿಕಂಡಕ್ಟರ್​ಗಳ ಕಾರಣದಿಂದಾಗಿ ಕಾರು ಬೆಲೆಗಳ ಬೆಲೆಯೂ ಹೆಚ್ಚಾದ ಕಾರಣದಿಂದ ಬಳಸಿದ ಕಾರುಗಳ ಬೆಲೆ ಶೇಕಡಾ 37ರಷ್ಟು ಹೆಚ್ಚಿದೆ. ಡಿಸೆಂಬರ್ ತಿಂಗಳಲ್ಲಿ ಹೊಸ ಕಾರುಗಳ ಬೆಲೆ ಶೇಕಡಾ 1ರಷ್ಟು ಹೆಚ್ಚಿದ್ದು, 2021ರ ವರ್ಷಪೂರ್ತಿ ಶೇಕಡಾ 11.8ರಷ್ಟು ಏರಿಕೆಯಾಗಿದೆ. ಉಡುಪು ವೆಚ್ಚ ಡಿಸೆಂಬರ್​ನಲ್ಲಿ ಶೇಕಡಾ 1.7ರಷ್ಟು, ಏರಿಕೆ ಕಂಡಿದೆ. 2021ರಲ್ಲಿ ಇದು ಏರಿಕೆ ಕಂಡಿದ್ದು, ಒಟ್ಟು ಶೇಕಡಾ 5.8ರಷ್ಟು.

ಈಗಾಗಲೇ ಗ್ಯಾಸೋಲಿನ್ ಮತ್ತು ಇತರ ಇಂಧನ ಬೆಲೆಗಳು ಕಡಿಮೆ ಇದ್ದು, ಈ ಕಡಿಮೆ ಬೆಲೆಯನ್ನು ಮುಂದುವರೆಸುವ ಕಾರಣದಿಂದ ಮುಂಬರುವ ತಿಂಗಳುಗಳಲ್ಲಿ ಒಟ್ಟಾರೆ ಹಣದುಬ್ಬರ ಕಡಿಮೆಯಾಗುತ್ತದೆ ಎಂದು ಕೆಲವು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಅಮೆರಿಕದಲ್ಲಿ ಒಂದೇ ದಿನ 13 ಲಕ್ಷಕ್ಕೂ ಹೆಚ್ಚು ಕೋವಿಡ್ ಸೋಂಕಿತರು​ ಪತ್ತೆ, ಹೊಸ ಜಾಗತಿಕ ದಾಖಲೆ

ABOUT THE AUTHOR

...view details