ವಾಷಿಂಗ್ಟನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇದೇ ಗುರುವಾರ ದೋಷಾರೋಪ ಅಥವಾ ಮಹಾಭಿಯೋಗ(Impeachment)ಕ್ಕೆ ಸಂಬಂಧಿಸಿದ ಪ್ರಕ್ರಿಯೆ ಆರಂಭಿಸಲು ಅಮೆರಿಕ ಸಂಸತ್ನಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.
2020ರ ನವೆಂಬರ್ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮರು ಆಯ್ಕೆಗಾಗಿ ಡೊನಾಲ್ಡ್ ಟ್ರಂಪ್ ಫೆಡರಲ್ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಈಗಾಗಲೇ ನಡೆದ ರಹಸ್ಯ ಸಭೆಯಲ್ಲಿ ವಿದೇಶಾಂಗ ವ್ಯವಹಾರ ಮತ್ತು ಮೇಲ್ವಿಚಾರಣಾ ಸಮಿತಿಗಳು ಅಭಿಪ್ರಾಯಪಟ್ಟಿವೆ.
ಟ್ರಂಪ್ ವಿರುದ್ಧ ಒಂದಷ್ಟು ವಿಷಯದಲ್ಲಿ ಆರೋಪ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ವಿಚಾರಣೆ ಅಗತ್ಯವಿದೆ ಎಂದಿರುವ ಹೌಸ್ ಡೆಮಾಕ್ರಟ್ಸ್ ಮುಂದಿನ ಹಂತದ ವಿಚಾರಣೆಗೆ ಅನುಕೂಲವಾಗಲು ದೋಷಾರೋಪ ಅಂದರೆ (ಇಂಪೀಚ್ಮೆಂಟ್) ಆರಂಭಿಕ ಪ್ರಕ್ರಿಯೆಗಳಿಗೆ ಚಾಲನೆ ನೀಡಲು ಗುರುವಾರ ಮತ ಚಲಾಯಿಸಲಿದೆ.
ಇಂಪೀಚ್ಮೆಂಟ್( ಅಧ್ಯಕ್ಷ ಸ್ಥಾನದ ವಜಾ ಮಾಡುವ) ಪ್ರಕ್ರಿಯೆಗೆ ವೈಟ್ಹೌಸ್ ಪ್ರತಿಕ್ರಿಯಿಸಿದ್ದು, ಕಾನೂನು ಬಾಹಿರವಾಗಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಮಾಧ್ಯಮ ಕಾರ್ಯದರ್ಶಿ ಸ್ಟೆಫಾನಿ ಗ್ರಿಶಮ್ ಕಿಡಿಕಾರಿದ್ದಾರೆ.
ಮಾಜಿ ವಿದೇಶಾಂಗ ಕಾರ್ಯದರ್ಶಿ ಜಾನ್ ಬೋಲ್ಟನ್ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದ ಚಾರ್ಲ್ಸ್ ಕಪ್ಪರ್ಮ್ಯಾನ್ ತಮ್ಮ ಕಾರ್ಯಾವಧಿಯಲ್ಲಿ ಅಕ್ರಮ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸೋಮವಾರದ ವಿಚಾರಣೆಗೆ ಕಪ್ಪರ್ಮ್ಯಾನ್ ಗೈರಾಗಿದ್ದಾರೆ. ಹೀಗಾಗಿ ಈ ವಿಚಾರಣೆಯನ್ನು ನ್ಯಾಯಾಧೀಶರು ಗುರುವಾರಕ್ಕೆ ಮುಂದೂಡಿಕೆ ಮಾಡಿದ್ದಾರೆ.
ಇಂಪೀಚ್ಮೆಂಟ್ ವಿರುದ್ಧ ಟ್ರಂಪ್ ಕಿಡಿ: ಗುರುವಾರದ ಇಂಪೀಚ್ಮೆಂಟ್ ಪ್ರಕ್ರಿಯೆಗಳ ಬಗ್ಗೆ ಪ್ರಕ್ರಿಯೆ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸಲು ನಡೆಸುತ್ತಿರುವ ಕುತಂತ್ರ ಎಂದು ಟ್ರಂಪ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಯಾಕೆ ಟ್ರಂಪ್ ವಿರುದ್ಧ ದೋಷಾರೋಪ ಮಂಡನೆ?: ಒಂದೊಂದು ದೇಶಕ್ಕೆ ಒಂದೊಂದು ಕಾನೂನು, ತನ್ನದೇ ನಿಯಮಗಳು ಇರುತ್ತವೆ. ಅದರಂತೆ ಅಮೆರಿಕ ಸಹ ತನ್ನದೇ ಆದ ಸಂವಿಧಾನ ಹೊಂದಿದೆ. ಅಲ್ಲಿನ ನಿಯಮದ ಪ್ರಕಾರ ಅಮೆರಿಕದ ಅಧ್ಯಕ್ಷರಾಗಿರುವವರು ಬೇರೆ ದೇಶದವರ ಸಹಾಯ ಪಡೆಯುವಂತಿಲ್ಲ. ಅಷ್ಟೇ ಅಲ್ಲ ದೇಶದ ಆಂತರಿಕ ವಿಚಾರಗಳ ಬಗ್ಗೆ ಮೂರನೇ ದೇಶದ ಮುಖ್ಯಸ್ಥರೊಂದಿಗೆ ಮಾತನಾಡುವಂತಿಲ್ಲ. ಆದರೆ, ಟ್ರಂಪ್ ಮುಂಬರುವ 2020 ರ ಚುನಾವಣೆಗಾಗಿ ಉಕ್ರೇನ್ ಅಧ್ಯಕ್ಷರ ನೆರವು ಬಯಸಿದ್ದಾರೆ ಎನ್ನಲಾಗಿದೆ. ಇದು ಈಗ ಅಧ್ಯಕ್ಷರ ವಿರುದ್ಧ ಮಹಾಭೀಯೋಗ ಅಂದರೆ ಅಧ್ಯಕ್ಷ ಪದವಿಯಿಂದ ತೆಗೆದು ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ದೋಷಾರೋಪ/ ಮಹಾಭಿಯೋಗ ಪ್ರಕ್ರಿಯೆ ನಡೆಯೋದು ಹೇಗೆ?:ಅಮೆರಿಕ ಕಾಂಗ್ರೆಸ್ನಲ್ಲಿ ಟ್ರಂಪ್ ವಿರುದ್ಧ ದೋಷಾರೋಪ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗುತ್ತದೆ. ಇಲ್ಲಿ ತನಿಖೆಗೆ ಒಂದು ಸಮಿತಿಯನ್ನ ನೇಮಕ ಮಾಡಲಾಗುತ್ತದೆ. ತನಿಖೆಯಲ್ಲಿ ತಪ್ಪಿತಸ್ಥ ಎಂದು ಸಾಬೀತಾದರೆ ಬಹುಮತದ ನಿರ್ಣಯ ಮಂಡಿಸಿ, ಮಹಾಭೀಯೋಗಕ್ಕಾಗಿ ಕಾಂ ಗ್ರೆಸ್ಗೆ ಅಧಿಕಾರ ಸಿಗುತ್ತದೆ. ಬಳಿಕ ಅದನ್ನು ಸೆನೆಟ್ನಲ್ಲಿ ಅಲ್ಲಿನ ಸುಪ್ರೀಂಕೋರ್ಟ್ ಸಿಜೆಐ ನೇತೃತ್ವದಲ್ಲಿ ಟ್ರಂಪ್ ವಿಚಾರಣೆ ನಡೆಸುತ್ತದೆ. ಒಂದೊಮ್ಮೆ ಅಲ್ಲಿ ಆರೋಪ ಸಾಬೀತಾದರೆ ಮೂರನೇ 2ರಷ್ಟು ಬಹುಮತದಿಂದ ಅಧ್ಯಕ್ಷರ ಮಹಾಭಿಯೋಗ ನಡೆಸಲಾಗುತ್ತದೆ.