ಕರ್ನಾಟಕ

karnataka

ETV Bharat / international

H-1B ವೀಸಾದಡಿ ಬರುವ ಮಕ್ಕಳಿಗೂ ಪೌರತ್ವ: ಬೈಡನ್‌ ಸರ್ಕಾರದ ಮಹತ್ವದ ನಿರ್ಧಾರ - The passage of the American Dream and Promise Act of 2021

ಕೃಷಿ ಕಾರ್ಮಿಕರೂ ಸೇರಿದಂತೆ ವಿವಿಧ ವರ್ಗದ ವಲಸಿಗರಿಗೆ ಹಾಗೂ ಹೆಚ್ -1 ಬಿ ವೀಸಾ ಅಡಿ ಅಮೆರಿಕಕ್ಕೆ ಬಂದವರ ಮಕ್ಕಳಿಗೆ ಪೌರತ್ವ ನೀಡಲು ದಾರಿ ಸುಗಮಗೊಳಿಸುವ ಎರಡು ಮಹತ್ವದ ಮಸೂದೆಗಳಿಗೆ ಅಮೆರಿಕದ ಹೌಸ್‌ ಆಫ್‌ ‍ರೆ‍ಪ್ರೆಸೆಂಟೇಟಿವ್‌ (ಕೆಳಮನೆ) ಅನುಮೋದನೆ ನೀಡಿದೆ.

US House passes key bills providing citizenship to dreamers, farmworker immigrants
ವಲಸೆ ವ್ಯವಸ್ಥೆ ಸುಧಾರಿಸುವಲ್ಲಿ ನಿರ್ಣಾಯಕ ಹೆಜ್ಜೆಯಿಟ್ಟ ಯುಎಸ್​

By

Published : Mar 19, 2021, 5:39 PM IST

ವಾಷಿಂಗ್ಟನ್: ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎರಡು ಪ್ರಮುಖ ಮಸೂದೆಗಳನ್ನು ಅಂಗೀಕರಿಸಿದೆ. ಕೃಷಿ ಕಾರ್ಮಿಕರು ಸೇರಿದಂತೆ ವಿವಿಧ ವರ್ಗದ ವಲಸಿಗರಿಗೆ ಹಾಗೂ ಹೆಚ್ -1 ಬಿ ವೀಸಾ ಅಡಿ ಅಮೆರಿಕಕ್ಕೆ ಬಂದವರ ಮಕ್ಕಳಿಗೆ ಪೌರತ್ವ ನೀಡಲು ದಾರಿ ಸುಗಮಗೊಳಿಸುವ ಎರಡು ಮಹತ್ವದ ಮಸೂದೆಗಳಿಗೆ ಅಂಗೀಕಾರ ದೊರೆತಿದೆ.

‘ಅಮೆರಿಕನ್‌ ಡ್ರೀಮ್‌ ಆ್ಯಂಡ್‌ ಪ್ರಾಮಿಸ್‌ ಆ್ಯಕ್ಟ್‌–2021’ ಅನ್ನು ಗುರುವಾರ ಸದನವು 228-197 ಮತಗಳಿಂದ ಅಂಗೀಕರಿಸಿದೆ ಎಂದು ಅಧ್ಯಕ್ಷ ಜೋ ಬೈಡನ್ ತಿಳಿಸಿದರು. ಇದು ದೇಶದ ವಲಸೆ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ನಿರ್ಣಾಯಕ ಮೊದಲ ಹೆಜ್ಜೆ ಎಂದು ಬಣ್ಣಿಸಿದರು.

ಇದನ್ನೂ ಓದಿ:ಭಾರತವನ್ನು 'ಮಹಿಳಾ ನೇತೃತ್ವದ ಅಭಿವೃದ್ಧಿ ದೇಶ'ವನ್ನಾಗಿಸಿದ ಪ್ರಧಾನಿ ಮೋದಿ: ತಿರುಮೂರ್ತಿ ಶ್ಲಾಘನೆ

ಕೃಷಿ ಕಾರ್ಮಿಕರು ಸೇರಿದಂತೆ ವಿವಿಧ ವರ್ಗದ ವಲಸಿಗರಿಗೆ ಹಾಗೂ ಹೆಚ್ -1 ಬಿ ವೀಸಾ ಅಡಿ ಅಮೆರಿಕಕ್ಕೆ ಬಂದವರ ಮಕ್ಕಳಿಗೆ ಪೌರತ್ವ ನೀಡಲು ದಾರಿ ಸುಗಮಗೊಳಿಸುವ ಎರಡು ಮಹತ್ವದ ಮಸೂದೆಗಳಿಗೆ ಅಮೆರಿಕದ ಹೌಸ್‌ ಆಫ್‌ ‍ರೆ‍ಪ್ರೆಸೆಂಟೇಟಿವ್‌ (ಕೆಳಮನೆ) ಅನುಮೋದನೆ ನೀಡಿದೆ. ಸೆನೆಟ್‌ನ ಅನುಮೋದನೆ ದೊರೆತ ನಂತರ, ಈ ಮಸೂದೆ ಕಾಯ್ದೆ ರೂಪದಲ್ಲಿ ಜಾರಿಯಾಗುವುದು.

ಮಗುವಾಗಿದ್ದಾಗ ಪಾಲಕರೊಂದಿಗೆ ಅಮೆರಿಕಕ್ಕೆ ಬಂದವರಿಗೆ ‘ಡ್ರೀಮರ್ಸ್‌’ ಎಂದು ಕರೆಯಲಾಗುತ್ತದೆ. ಇವರನ್ನು ಸೇರಿದಂತೆ ವಿವಿಧ ವರ್ಗದ ವಲಸಿಗರು ಅಮೆರಿಕದ ಪೌರತ್ವದ ನಿರೀಕ್ಷೆಯಲ್ಲಿದ್ದಾರೆ. 5 ಲಕ್ಷಕ್ಕೂ ಅಧಿಕ ಭಾರತೀಯರು ಸೇರಿದಂತೆ 1.10 ಕೋಟಿ ವಲಸಿಗರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

For All Latest Updates

ABOUT THE AUTHOR

...view details