ವಾಷಿಂಗ್ಟನ್ ಡಿಸಿ (ಅಮೆರಿಕ): ಸೆನೆಟ್ನ ವಿರೋಧದ ನಡುವೆಯೂ ವಾಷಿಂಗ್ಟನ್ ಡಿಸಿಯನ್ನು ಅಮೆರಿಕದ 51ನೇ ರಾಜ್ಯವನ್ನಾಗಿ ಮಾಡುವ ಮಸೂದೆಯನ್ನು ಯುಎಸ್ ಕಾಂಗ್ರೆಸ್ (ಸಂಸತ್ತು) ಅಂಗೀಕರಿಸಿದೆ.
ವಾಷಿಂಗ್ಟನ್ ಡಿಸಿಯನ್ನು 51ನೇ ರಾಜ್ಯವೆಂದು ಒಪ್ಪಿಕೊಳ್ಳುವ ಮಸೂದೆಗೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸಂಪೂರ್ಣವಾಗಿ ಮತ ಚಲಾಯಿಸಿದೆ. ಸೆನೆಟ್ನಲ್ಲಿ ಪರ-ವಿರೋಧ ವ್ಯಕ್ತವಾಗಿದೆ. ರಿಪಬ್ಲಿಕನ್ ಪಕ್ಷದ ಯಾರೊಬ್ಬರು ಕೂಡ ಮಸೂದೆ ಪರವಾಗಿ ಮತ ಚಲಾಯಿಸಲಿಲ್ಲ.
ಇತಿಹಾಸದಲ್ಲಿ ಎರಡನೇ ಬಾರಿಗೆ ಶ್ವೇತಭವನ ಸೇರಿದಂತೆ ಡೆಮಾಕ್ರೆಟಿಕ್ ಪಕ್ಷದ ಬೆಂಬಲದೊಂದಿಗೆ ಮಾತ್ರ ಯುಎಸ್ ಕಾಂಗ್ರೆಸ್ ಮಸೂದೆಯನ್ನು ಅಂಗೀಕರಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿದಂತೆ ಹಲವಾರು ಗಣ್ಯರು ಮತ್ತು ಶಾಸಕರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರೂ, ಮಸೂದೆಯನ್ನು ಸಂಪೂರ್ಣವಾಗಿ ಅಂಗೀಕರಿಸಲು ಯುಎಸ್ ಸೆನೆಟ್ನಲ್ಲಿ ಇನ್ನೂ ಐದು ಮತಗಳು ಬೇಕಾಗಿವೆ.