ವಾಷಿಂಗ್ಟನ್ :ಟ್ರಂಪ್ ಮೇಲಿನ ದೋಷಾರೋಪಣೆ ಪ್ರಕರಣ ಸಂಬಂಧದಲ್ಲಿ ಟ್ರಂಪ್ ಪರ ವಕೀಲರು ಕಾನೂನು ವಿವರಗಳನ್ನು ಸಲ್ಲಿಸಿದ್ದಾರೆ. ಈಗಾಗಲೇ ವಾಗ್ದಂಡನೆಯಿಂದ ಪಾರಾಗಲು ಟ್ರಂಪ್ ಸಿದ್ಧತೆ ನಡೆಸಿದ್ದು ಈ ಕುರಿತು ವಾದ ಮಾಡಲು ವಕೀಲರನ್ನ ನೇಮಿಸಿದ್ದಾರೆ.
ಕಳೆದ ವರ್ಷ ಶ್ವೇತ ಭವನದ ಮೇಲೆ ದಾಳಿ ವೇಳೆ ಪ್ರತಿಭಟನಾನಿರತರಿಗೆ ಪ್ರಚೋದನೆ ನೀಡಿದ್ದಾರೆ ಎಂಬ ದೋಷಾರೋಪ ಹೊತ್ತಿರುವ ಟ್ರಂಪ್ ವಿರುದ್ಧ ವಾಗ್ದಂಡನೆ ಅಸ್ತ್ರ ಹೂಡಲು ಡೆಮಾಕ್ರೆಟಿಕ್ ಪಾರ್ಟಿ ಆಗ್ರಹಿಸಿದೆ.
ಅಲ್ಲದೆ ಅಧಿಕಾರದಿಂದ ಅವರನ್ನು ತಡೆ ಹಿಡಿದು, ಶಿಕ್ಷೆಗೆ ಗುರಿಪಡಿಸುವಂತೆಯೂ ಆಗ್ರಹಿಸಿವೆ. ಆದರೆ, ಈ ದೋಷಾರೋಪಣೆ ಅಸಂವಿಧಾನಿಕವಾಗಿದೆ. ಅಧಿಕಾರ ತೊರೆದಿರುವುದರಿಂದ ವಾಗ್ದಂಡನೆ ಸಂವಿಧಾನ ಬದ್ಧ ವಾದವಾಗಿಲ್ಲ ಎಂದು ಟ್ರಂಪ್ ಪರವಾಗಿ ವಾದಿಸಲಾಗಿದೆ.
ಈ ದೋಷಾರೋಪಣೆಯು ಮುಂದಿನ ವಾರದಿಂದ ಸೆನೆಟ್ನಲ್ಲಿ ವಿಚಾರಣೆ ಆರಂಭವಾಗುವ ಸಾಧ್ಯತೆ ಇದೆ. ಟ್ರಂಪ್ ಅಮೆರಿಕ ಇತಿಹಾಸದಲ್ಲಿಯೇ ಎರಡೆರಡು ಬಾರಿ ವಾಗ್ದಂಡನೆಗೊಳಗಾದ ಅಧ್ಯಕ್ಷ ಎಂಬ ಅಪಕೀರ್ತಿಗೆ ಒಳಗಾಗಿದ್ದಾರೆ.
ಇದನ್ನೂ ಓದಿ:$1.9 ಟ್ರಿಲಿಯನ್ ಪ್ಯಾಕೇಜ್ ಅನುಮೋದಿಸುವ ಪ್ರಕ್ರಿಯೆ ಆರಂಭಿಸಿದ ಬೈಡನ್