ವಾಷಿಂಗ್ಟನ್:ಕ್ಯಾಪಿಟಲ್ ಹಿಲ್ ಕಟ್ಟಡದಲ್ಲಿ ಜನವರಿ 6ರಂದು ನಡೆದ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸುವ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಿರ್ಣಯವನ್ನು ಅಂಗೀಕರಿಸಿದೆ. ಯುಎಸ್ ಹೌಸ್ನಲ್ಲಿ 222-190 ಮತಗಳೊಂದಿಗೆ ಈ ಕ್ರಮಕ್ಕೆ ಅನುಮೋದನೆ ದೊರಕಿದೆ.
ಕ್ಯಾಪಿಟಲ್ ಹಿಲ್ ಗಲಭೆ ತನಿಖೆಗೆ ಸಮಿತಿ ರಚನೆ: ನಿರ್ಣಯ ಅಂಗೀಕರಿಸಿದ ಯುಎಸ್ ಹೌಸ್ - ಅಮೆರಿಕ ಸುದ್ದಿ
ಕ್ಯಾಪಿಟಲ್ ಹಿಲ್ ಘಟನೆಯ ತನಿಖೆ ನಡೆಸುವ ಸಮಿತಿಯನ್ನು ರಚಿಸುವ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಿರ್ಣಯವನ್ನು ಯುಎಸ್ ಹೌಸ್ ಅಂಗೀಕರಿಸಿದೆ. ಈ ಸಮಿತಿಯಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ 13 ಶಾಸಕರು, ಸ್ಪೀಕರ್ ನ್ಯಾನ್ಸಿ ಪೆಲೋಸಿ ನೇಮಿಸಿದ ಎಂಟು ಮಂದಿ ಮತ್ತು ಹೌಸ್ ಮೈನಾರಿಟಿ ಮುಖಂಡ ಕೆವಿನ್ ಮೆಕಾರ್ಥಿ ನೇಮಿಸಿದ ಐದು ಮಂದಿ ಸದಸ್ಯರು ಇರಲಿದ್ದಾರೆ.

ಕಳೆದ ತಿಂಗಳು ಸೆನೆಟ್ ರಿಪಬ್ಲಿಕನ್ನರು ಸ್ವತಂತ್ರ ಉಭಯಪಕ್ಷೀಯ ಆಯೋಗವನ್ನು ಸ್ಥಾಪಿಸುವ ಶಾಸನವನ್ನು ನಿರ್ಬಂಧಿಸಿದ ನಂತರ ಆಯ್ಕೆ ಸಮಿತಿಯ ನಿರ್ಧಾರ ಜಾರಿಗೆ ಬಂದಿದೆ. ಕ್ಯಾಪಿಟಲ್ ಹಿಲ್ ಘಟನೆಯ ತನಿಖೆ ನಡೆಸುವ ಸಮಿತಿಯಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ 13 ಶಾಸಕರು, ಸ್ಪೀಕರ್ ನ್ಯಾನ್ಸಿ ಪೆಲೋಸಿ ನೇಮಿಸಿದ ಎಂಟು ಮಂದಿ ಮತ್ತು ಹೌಸ್ ಮೈನಾರಿಟಿ ಮುಖಂಡ ಕೆವಿನ್ ಮೆಕಾರ್ಥಿ ನೇಮಿಸಿದ ಐದು ಮಂದಿ ಸದಸ್ಯರು ಇರಲಿದ್ದಾರೆ.
ಕ್ಯಾಪಿಟಲ್ ಕಟ್ಟಡದಲ್ಲಿ ಜನವರಿ 6ರಂದು ನಡೆದ ಘಟನೆಯ ಸಂಗತಿಗಳು, ಸಂದರ್ಭಗಳು ಮತ್ತು ಕಾರಣಗಳನ್ನು ಸಮಿತಿ ತನಿಖೆ ಮಾಡಿ ವರದಿ ಮಾಡಲಿದೆ. ಇದಲ್ಲದೆ, ಯುಎಸ್ ಕ್ಯಾಪಿಟಲ್ ಪೊಲೀಸ್ ಮತ್ತು ಇತರ ಫೆಡರಲ್, ರಾಜ್ಯ ಮತ್ತು ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳ ಸಿದ್ಧತೆ ಮತ್ತು ಪ್ರತಿಕ್ರಿಯೆಯನ್ನು ತನಿಖೆ ಮಾಡುತ್ತದೆ.