ವಾಷಿಂಗ್ಟನ್ (ಅಮೆರಿಕ) : ನ್ಯಾಷನಲ್ ರೈಫಲ್ ಅಸೋಸಿಯೇಷನ್ (National Rifle Association) ದಿವಾಳಿತನದ ರಕ್ಷಣೆಗಾಗಿ ಅರ್ಜಿ ಸಲ್ಲಿಸಿರುವುದಾಗಿ ಘೋಷಿಸಿದೆ. ಈ ಮಧ್ಯೆ ಸಂಸ್ಥೆಯು ನ್ಯೂಯಾರ್ಕ್ನಿಂದ ಟೆಕ್ಸಾಸ್ ರಾಜ್ಯಕ್ಕೆ ತನ್ನ ಕಾರ್ಯಾಚರಣೆ ವರ್ಗಾಯಿಸುವುದಾಗಿ ತಿಳಿಸಿದೆ.
ಎನ್ಆರ್ಎ ದಿವಾಳಿತನದ ರಕ್ಷಣೆಗಾಗಿ ಅರ್ಜಿ ಸಲ್ಲಿಕೆ..! - ನ್ಯೂಯಾರ್ಕ್ನಿಂದ ಟೆಕ್ಸಾಸ್ ರಾಜ್ಯಕ್ಕೆ ಎನ್ಆರ್ಎ ಶಿಫ್ಟ್
ಟೆಕ್ಸಾಸ್ ಎನ್ಆರ್ಎ ಕೊಡುಗೆಗಳನ್ನು ಗೌರವಿಸುತ್ತದೆ. ಸಾಂವಿಧಾನಿಕ ಸ್ವಾತಂತ್ರ್ಯ ಎತ್ತಿಹಿಡಿಯುವಲ್ಲಿ ಅವರೂ ಭಾಗಿಯಾಗುತ್ತಾರೆ ಎಂದು ಅವರು ತಿಳಿಸಿದರು.
ಅರ್ಜಿ
ಟೆಕ್ಸಾಸ್ನ ಉತ್ತರ ಜಿಲ್ಲೆಯ ನ್ಯಾಯಾಲಯದಲ್ಲಿ ಸ್ವಯಂಪ್ರೇರಿತವಾಗಿ 11 ಅರ್ಜಿಗಳನ್ನು ಸಲ್ಲಿಸಿರುವುದಾಗಿ ಎನ್ಆರ್ಎ ಕಾರ್ಯನಿರ್ವಾಹಕ ಉಪಾಧ್ಯಕ್ಷ ವೇಯ್ನ್ ಲಾಪಿಯರ್ ತಿಳಿಸಿದ್ದಾರೆ. ಟೆಕ್ಸಾಸ್ ಎನ್ಆರ್ಎ ಕೊಡುಗೆಗಳನ್ನು ಗೌರವಿಸುತ್ತದೆ. ಸಾಂವಿಧಾನಿಕ ಸ್ವಾತಂತ್ರ್ಯ ಎತ್ತಿಹಿಡಿಯುವಲ್ಲಿ ಅವರೂ ಭಾಗಿಯಾಗುತ್ತಾರೆ ಎಂದು ಅವರು ತಿಳಿಸಿದರು.
ರಿಪಬ್ಲಿಕನ್ ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್, ಟೆಕ್ಸಾಸ್ಗೆ ತೆರಳುವ ಎನ್ಆರ್ಎ ನಿರ್ಧಾರ ಸ್ವಾಗತಿಸಿದರು.