ಕರ್ನಾಟಕ

karnataka

ಟ್ರಂಪ್ ಮರು ಪ್ರವೇಶ ತಡೆಹಿಡಿದ ಯುಎಸ್ ಚಲನಚಿತ್ರ

By

Published : Feb 8, 2021, 4:33 PM IST

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುಎಸ್ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ - ಅಮೇರಿಕನ್ ಫೆಡರೇಷನ್ ಆಫ್ ಟೆಲಿವಿಷನ್ ಅಂಡ್​ ರೇಡಿಯೋ ಆರ್ಟಿಸ್ಟ್ ಯೂನಿಯನ್​ಗೆ ಮರು ಪ್ರವೇಶಿಸುವುದನ್ನು ಪೂರ್ವಭಾವಿಯಾಗಿ ನಿರಾಕರಿಸುವ ನಿರ್ಣಯವನ್ನು ಅಂಗೀಕರಿಸಿದೆ.

trump
trump

ವಾಷಿಂಗ್ಟನ್ (ಯು.ಎಸ್): ಯುಎಸ್ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ - ಅಮೆರಿಕನ್ ಫೆಡರೇಷನ್ ಆಫ್ ಟೆಲಿವಿಷನ್ ಅಂಡ್​ ರೇಡಿಯೋ ಆರ್ಟಿಸ್ಟ್ (ಎಸ್‌ಎಜಿ-ಎಎಫ್​ಟಿಆರ್​ಎ) ಸಂಘಟನೆಯು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಂಘಟನೆಗೆ ಮರು ಪ್ರವೇಶ ಪಡೆಯಬಹುದಾದ ಅರ್ಜಿಗಳನ್ನು ಪೂರ್ವಭಾವಿಯಾಗಿ ನಿರಾಕರಿಸುವ ನಿರ್ಣಯ ಅಂಗೀಕರಿಸಿದೆ.

ಯೂನಿಯನ್‌ನ ರಾಷ್ಟ್ರೀಯ ಮಂಡಳಿಯು ಶನಿವಾರ ಜೂಮ್ ವಿಡಿಯೋ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದು, ಟ್ರಂಪ್ ವಿರುದ್ಧದ ಶಿಸ್ತಿನ ಆರೋಪಗಳ ಕುರಿತು ಕಳವಳ ವ್ಯಕ್ತಪಡಿಸಲಾಯಿತು.

ಮುಖ್ಯವಾಗಿ ಯೂನಿಯನ್‌ನ ಪತ್ರಕರ್ತ ಸದಸ್ಯರ ವಿರುದ್ಧದ ವೈರತ್ವ ಮತ್ತು ಒಕ್ಕೂಟದ ಮೌಲ್ಯ, ಸಮಗ್ರತೆಯನ್ನು ಟ್ರಂಪ್ ಕಡೆಗಣಿಸಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಸ್‌ಎಜಿ-ಎಎಫ್​ಟಿಆರ್​ಎ ಹೇಳಿಕೆಯಲ್ಲಿ ತಿಳಿಸಿದೆ.

ಟ್ರಂಪ್ ಈ ಹಿಂದೆ 1989 ರಿಂದ ಎಸ್‌ಎಜಿ-ಎಎಫ್​ಟಿಆರ್​ಎ ಸದಸ್ಯರಾಗಿದ್ದರು. ಈ ಒಕ್ಕೂಟವು ಸುಮಾರು 1,60,000 ಚಲನಚಿತ್ರ ಮತ್ತು ದೂರದರ್ಶನ ನಟರು, ಪತ್ರಕರ್ತರು, ಕಲಾವಿದರು ಮತ್ತು ಇತರ ಮಾಧ್ಯಮ ವೃತ್ತಿಪರರನ್ನು ಪ್ರತಿನಿಧಿಸುತ್ತದೆ.

ABOUT THE AUTHOR

...view details