ವಾಷಿಂಗ್ಟನ್(ಅಮೆರಿಕ):ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್‌ಸಿಕ್ಯು) ಅನ್ನು 'ವಂಡರ್ ಡ್ರಗ್' ಎಂದು ಹೇಳಲಾಗುತ್ತಿರುವ ಸಮಯದಲ್ಲಿ, ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಶುಕ್ರವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಹೌದು, ಆಸ್ಪತ್ರೆಯ ಹೊರಗೆ ಅಥವಾ ಕ್ಲಿನಿಕಲ್ ಪ್ರಯೋಗಗಳಲ್ಲಿ ಕೋವಿಡ್ -19 ಗಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಅಥವಾ ಕ್ಲೋರೊಕ್ವಿನ್ ಬಳಕೆ ಮಾಡಬೇಡಿ. ಏಕೆಂದ್ರೆ ಇದರಿಂದ ಹೃದಯ ಸಮಸ್ಯೆಗಳಾಗುವ ಅಪಾಯವಿದೆ ಎಂದು ತಿಳಿಸಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಅಥವಾ ಕ್ಲೋರೊಕ್ವಿನ್‌ನೊಂದಿಗೆ ಚಿಕಿತ್ಸೆ ಪಡೆದ ಕೋವಿಡ್ -19 ರೋಗಿಗಳಲ್ಲಿ ಗಂಭೀರ ಹೃದಯದ ಲಯದ ಸಮಸ್ಯೆಗಳ ವರದಿಯಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಎಫ್‌ಡಿಎ ತಿಳಿಸಿದೆ.