ವಾಷಿಂಗ್ಟನ್: ಡೆಮಾಕ್ರಟ್‌ಗಳು "ಚುನಾವಣೆಯನ್ನು ಕಸಿದುಕೊಳ್ಳಲುಯತ್ನಿಸುತ್ತಿದ್ದಾರೆ" ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನ್ಯಾಯಯುತವಾಗಿ ಮತ ಎಣಿಕೆ ಮಾಡಿದ್ರೆ ನಾನು ಸುಲಭವಾಗಿ ಗೆಲುವು ಸಾಧಿಸುತ್ತೇನೆ ಎಂದಿದ್ದಾರೆ.
ನ್ಯಾಯಯುತವಾಗಿ ಮತ ಎಣಿಕೆ ಮಾಡಿದ್ರೆ ಗೆಲುವು ನನ್ನದೆ: ಟ್ರಂಪ್ - ಡೊನಾಲ್ಡ್ ಟ್ರಂಪ್
ನ್ಯಾಯಯುತವಾಗಿ ಮತ ಎಣಿಕೆ ಮಾಡಿದ್ರೆ ನಾನು ಸುಲಭವಾಗಿ ಗೆಲುವು ಸಾಧಿಸುತ್ತೇನೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈಗಾಗಲೇ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಮತ ಎಣಿಕೆಯಲ್ಲಿ ಮುಂದಿದ್ದು, ಮ್ಯಾಜಿಕ್ ನಂಬರ್ ಸನಿಹದಲ್ಲಿದ್ದಾರೆ.
ವೈಟ್ ಹೌಸ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಟ್ರಂಪ್ "ನೀವು ನ್ಯಾಯಯುತವಾಗಿ ಮತ ಎಣಿಸಿದರೆ, ನಾನು ಸುಲಭವಾಗಿ ಗೆಲ್ಲುತ್ತೇನೆ. ನೀವು ಅಕ್ರಮ ಮತಗಳನ್ನು ಎಣಿಸಿದರೆ, ಅವರು ಚುನಾವಣೆಯನ್ನು ಕಸಿದುಕೊಳ್ಳಲು ಪ್ರಯತ್ನಿಸಬಹುದು. ನಾನು ಈಗಾಗಲೇ ಅನೇಕ ನಿರ್ಣಾಯಕ ರಾಜ್ಯಗಳನ್ನು ಗೆದ್ದಿದ್ದೇನೆ" ಎಂದಿದ್ದಾರೆ.
"ಡೆಮಾಕ್ರಟಿಕ್ ದೊಡ್ಡ ದಾನಿಗಳ ಪಕ್ಷ, ಆ ಪಕ್ಷದವರ ಬಳಿ ಹೆಚ್ಚು ಹಣ ಮತ್ತು ಹೆಚ್ಚು ತಂತ್ರಜ್ಞಾನ ಇದೆ. ಆದರೆ ರಿಪಬ್ಲಿಕನ್ ಅಮೆರಿಕದ ಕಾರ್ಮಿಕರ ಪಕ್ಷವಾಗಿ ಮಾರ್ಪಟ್ಟಿದೆ ಎಂದು ಟ್ರಂಪ್ ಹೇಳಿದ್ದಾರೆ. ನಾವು ಎಲ್ಲಾ ಪ್ರಮುಖ ರಾಜ್ಯಗಳಲ್ಲಿ ಬಹಳಷ್ಟು ಗೆದ್ದಿದ್ದೇವೆ, ಆದರೆ ನಮ್ಮ ಸಂಖ್ಯೆಗಳು ಕಡಿಮೆಯಾಗಲು ಪ್ರಾರಂಭಿಸಿದವು" ಎಂದು ಟ್ರಂಪ್ ಬೇಸರ ವ್ಯಕ್ತಪಡಿಸಿದ್ದಾರೆ.