ವಾಷಿಂಗ್ಟನ್:ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಇದೀಗ ಪೆನ್ಸಿಲ್ವೇನಿಯಾ ಹಾಗೂ ಜಾರ್ಜಿಯಾದಲ್ಲೂ ಮುನ್ನಡೆ ಪಡೆದುಕೊಂಡಿದ್ದು, ಈ ಮೂಲಕ ವಿಜಯದ ಸಮೀಪ ಬಂದು ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ.
ಪೆನ್ಸಿಲ್ವೇನಿಯಾ, ಜಾರ್ಜಿಯಾದಲ್ಲೂ ಮುನ್ನಡೆ... ವಿಜಯದ ಹೊಸ್ತಿಲಲ್ಲಿ ಬೈಡನ್!? - ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್
ಅಮೆರಿಕದ ಶ್ವೇತ ಭವನಕ್ಕೆ ಇದೀಗ ಹೊಸ ಅಧ್ಯಕ್ಷ ಬರುವುದು ಬಹುತೇಕ ಖಚಿತವಾಗಿದ್ದು, ಜೋ ಬೈಡನ್ ಪೆನ್ಸಿಲ್ವೇನಿಯಾದಲ್ಲೂ ಮುನ್ನಡೆ ಪಡೆದುಕೊಂಡಿದ್ದಾರೆ.
ಇದುವರೆಗೆ ಬೈಡನ್ 253 ಎಲೆಕ್ಟ್ರೋರಲ್ ಮತ ಪಡೆದುಕೊಂಡಿದ್ದರೆ, ರಿಪಬ್ಲಿಕನ್ ಪಕ್ಷದ ಟ್ರಂಪ್ 214 ಮತ ಪಡೆದುಕೊಂಡಿದ್ದಾರೆ. ಸದ್ಯ ಜಾರ್ಜಿಯಾ, ನೆವಾಡಾ ಹಾಗೂ ನಾರ್ಥ್ ಕೊರೊಲಿಯಾಗಳಲ್ಲೂ ಬೈಡನ್ ಮುನ್ನುಗುತ್ತಿರುವುದು ಗೆಲುವು ಮತ್ತಷ್ಟು ಹತ್ತಿರವಾಗಿದೆ ಎಂದು ಹೇಳಲಾಗುತ್ತಿದೆ. ಬೈಡನ್ ಈಗ 5,587 ಮತಗಳಿಂದ ಮುನ್ನಡೆ ಸಾಧಿಸಿದ್ದು, ಮತಪತ್ರಗಳ ಎಣಿಕೆ ಪ್ರಗತಿಯಲ್ಲಿದೆ. ಬೈಡನ್ ಪೆನ್ಸಿಲ್ವೇನಿಯಾ ಗೆದ್ದರೆ ಶ್ವೇತಭವನ ಪ್ರವೇಶಿಸಲಿದ್ದಾರೆ.
ಇನ್ನು ಅಧಿಕೃತವಾಗಿ ಮತಗಳನ್ನು ಎಣಿಕೆ ಮಾಡಿದ್ರೆ ನಾನೇ ಸುಲಭವಾಗಿ ಗೆಲ್ಲುತ್ತೇನೆ. ಅನಧಿಕೃತವಾಗಿ ಮತ ಎಣಿಕೆ ಮಾಡಿ ಅವರು ಚುನಾವಣೆ ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ. ಹಲವು ರಾಜ್ಯಗಳಲ್ಲಿ ನಾನು ಈಗಾಗಲೇ ಗೆದ್ದಿರುವೆ. ನಾನು ಸುಲಭವಾಗಿ ಗೆಲ್ಲುತ್ತೇನೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ಸಂಪೂರ್ಣ ಮತ ಎಣಿಕೆ ಪ್ರಕ್ರಿಯೆ ಅಂತ್ಯವಾಗದ ಕಾರಣ ಅಧಿಕಾರಿಗಳು ಬಹಿರಂಗವಾಗಿ ವಿಜೇತರ ಹೆಸರು ಘೋಷಣೆ ಮಾಡಿಲ್ಲ.