ವಾಷಿಂಗ್ಟನ್ (ಯುಎಸ್ಎ): ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಚಾಲೆಂಜರ್ ಜೋ ಬೈಡನ್ ನಡುವೆ ಆಯ್ಕೆ ಮಾಡಲು ಲಕ್ಷಾಂತರ ಮತದಾರರು ಕೊರೊನಾ ವೈರಸ್ ನಡುವೆಯೂ ಮತ ಚಲಾಯಿಸಿದರು.
ವೈಯಕ್ತಿಕವಾಗಿ ಬಂದು ಮತ ಚಲಾಯಿಸಿದವರು ಕೆಲ ದಿನಗಳು ಅಥವಾ ವಾರಗಳ ಮೊದಲು ಮತ ಚಲಾಯಿಸಿದ 102 ಮಿಲಿಯನ್ ಅಮೆರಿಕನ್ನರನ್ನು ಸೇರಿಕೊಂಡರು. ಇದು 2016ರ ಅಧ್ಯಕ್ಷೀಯ ಚುನಾವಣೆಯ ಒಟ್ಟು ಮತಗಳ ಪೈಕಿ ಶೇಕಡಾ 73ರಷ್ಟು ಮತಗಳನ್ನು ಪ್ರತಿನಿಧಿಸಿದೆ.