ಕರ್ನಾಟಕ

karnataka

ETV Bharat / international

ಮಾನವನಿಗೆ ಹಂದಿ ಹೃದಯ ಕಸಿ.. ಹಾರ್ಟ್​ ಪೇಶೆಂಟ್​ಗೆ ಯಶಸ್ವಿ ಶಸ್ತ್ರಚಿಕಿತ್ಸೆ.. ವೈದ್ಯರ ಮೇರು ಸಾಧನೆ! - Successfully heart surgery and transplantation pig heart into human body

ಹಂದಿಯ ಹೃದಯವನ್ನು ರೋಗಿಗೆ ಅಳವಡಿಸುವಲ್ಲಿ ಅಮೆರಿಕದ​ ವೈದ್ಯರು ಯಶಸ್ವಿಯಾಗಿದ್ದಾರೆ.

US doctors transplant pig heart into human
ರೋಗಿಯ ದೇಹಕ್ಕೆ ಹಂದಿಯ ಹೃದಯ ಅಳವಡಿಕೆ

By

Published : Jan 11, 2022, 7:21 AM IST

Updated : Jan 11, 2022, 12:52 PM IST

ಲೆಕ್ಸಿಂಗ್ಟನ್ (ಅಮೆರಿಕ):ವೈದ್ಯರು ಹಂದಿಯ ಹೃದಯವನ್ನು ರೋಗಿಯಲ್ಲಿ ಅಳವಡಿಸಿ, ಅವರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೈದ್ಯಕೀಯ ವಿಜ್ಞಾನದಲ್ಲಿ ಈ ಮೂಲಕ ನೂತನ ಸಾಧನೆ ಮಾಡಲಾಗಿದೆ.

ಹಂದಿಯ ಹೃದಯದಿಂದಲೂ ಮಾನವ ಜೀವನ ಉಳಿಸಬಹುದು ಮತ್ತು ಪ್ರಾಣಿಗಳ ಅಂಗಾಂಗಗಳನ್ನ ಬಳಸಿಕೊಂಡು ಪ್ರಾಣ ಉಳಿಸಬಹುದು ಎಂಬುದನ್ನು ಈ ಅನ್ವೇಷಣೆ ಹಾಗೂ ಶಸ್ತ್ರಚಿಕಿತ್ಸೆ ತೋರಿಸಿಕೊಟ್ಟಿದೆ.

ಶಸ್ತ್ರಚಿಕಿತ್ಸೆಯ ಮೂರು ದಿನಗಳ ನಂತರ ರೋಗಿಯು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:ಒಮಿಕ್ರಾನ್​ನ ಮೊದಲ ಸಮುದಾಯ ಹರಡುವಿಕೆ ವರದಿ: ಚೀನಾದಲ್ಲಿ ಇಬ್ಬರಿಗೆ ಪಾಸಿಟಿವ್​

57 ವರ್ಷ ವಯಸ್ಸಿನ ಡೇವಿಡ್ ಬೆನೆಟ್ ತೀವ್ರವಾದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಶುಕ್ರವಾರ ಅವರಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿ ಹಂದಿ ಹೃದಯವನ್ನು ಯಶಸ್ವಿಯಾಗಿ ಜೋಡನೆ ಮಾಡಿ ಬದುಕಿಸಲಾಗಿತ್ತು. ಈ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಮಾನವನ ದೇಹದಲ್ಲಿ ಪ್ರಾಣಿಗಳ ಹೃದಯವು ಚನ್ನಾಗಿಯೇ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ದೃಢೀಕರಿಸಲಾಗಿದೆ.

ಶಸ್ತ್ರಚಿಕಿತ್ಸೆಗಳಿಗೆ ಬೇಕಾದ ಮಾನವ ಅಂಗಾಗಗಳ ಕೊರತೆಯಿರುವ ಈ ಸಂದರ್ಭದಲ್ಲಿ ಪ್ರಾಣಿಗಳ ಅಂಗಗಳನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಯಲು ಅನ್ವೇಷಣೆಗಳು ನಡೆಯುತ್ತಿವೆ. ಈ ಅನ್ವೇಷಣೆಗೆ ಅಮೆರಿಕ​ ವೈದ್ಯರು ನಡೆಸಿರುವ ಈ ಶಸ್ತ್ರಚಿಕಿತ್ಸೆ ಹಲವರಿಗೆ ಪ್ರೇರಣೆಯಾಗಿದೆ.

Last Updated : Jan 11, 2022, 12:52 PM IST

ABOUT THE AUTHOR

...view details