ವಾಷಿಂಗ್ಟನ್: ನಟರಾದ ರಿಷಿ ಕಪೂರ್ ಮತ್ತು ಇರ್ಫಾನ್ ಖಾನ್ ಅವರ ನಿಧನಕ್ಕೆ ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಅಲೈಸ್ ವೇಲ್ಸ್ ಸಂತಾಪ ಸೂಚಿಸಿದ್ದಾರೆ.
ರಿಷಿ ಕಪೂರ್, ಇರ್ಫಾನ್ ಖಾನ್ ನಿಧನಕ್ಕೆ ಸಂತಾಪ ಸೂಚಿಸಿದ ಅಮೆರಿಕ ರಾಜತಾಂತ್ರಿಕ ಅಧಿಕಾರಿ - ಇರ್ಫಾನ್ ಖಾನ್
ರಿಷಿ ಕಪೂರ್ ಮತ್ತು ಇರ್ಫಾನ್ ಖಾನ್ ನಿಧನಕ್ಕೆ ಅಮೆರಿಕಾದ ರಾಜತಾಂತ್ರಿಕ ಅಧಿಕಾರಿ ಅಲೈಸ್ ವೇಲ್ಸ್ ಶೋಕ ವ್ಯಕ್ತಪಡಿಸಿದ್ದಾರೆ.
alice
"ಬಾಲಿವುಡ್ನ ಎರಡು ದಂತಕಥೆಗಳಾದ ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ನಮ್ಮನ್ನಗಲಿರುವುದನ್ನು ಕೇಳಿ ತುಂಬಾ ದುಃಖವಾಗಿದೆ. ಇಬ್ಬರೂ ನಟರು ಅಮೆರಿಕ, ಭಾರತ ಮತ್ತು ವಿಶ್ವಾದ್ಯಂತ ಹಲವಾರು ಪ್ರೇಕ್ಷಕರ ಹೃದಯ ಕದ್ದಿದ್ದಾರೆ" ಎಂದು ಆಲಿಸ್ ವೆಲ್ಸ್ ಟ್ವೀಟ್ ಮೂಲಕ ಹೇಳಿದ್ದಾರೆ.
ಎರಡು ವರ್ಷಗಳಿಂದ ಲ್ಯುಕೇಮಿಯಾದಿಂದ ಬಳಲುತ್ತಿದ್ದ ರಿಷಿ ಕಪೂರ್ (67) ಗುರುವಾರ ನಿಧನರಾಗಿದ್ದು, ಇರ್ಫಾನ್ ಖಾನ್ (53) ಕ್ಯಾನ್ಸರ್ನಿಂದ ಬುಧವಾರ ನಿಧನರಾಗಿದ್ದಾರೆ.