ಕರ್ನಾಟಕ

karnataka

ETV Bharat / international

ಭಯೋತ್ಪಾದನೆ ನಿರ್ಮೂಲನೆಗೆ ನ್ಯೂಜಿಲ್ಯಾಂಡ್​ ದಿಟ್ಟ ಹೆಜ್ಜೆ... ಒಡಂಬಡಿಕೆಗೆ ಸಹಿ ಹಾಕಲು ಅಮೆರಿಕ ನಕಾರ..! - online extremism

ಪ್ರಸ್ತುತ ಈ ಒಡಂಬಡಿಕೆಗೆ ಬ್ರಿಟಿಷ್ ಪ್ರಧಾನಿ ತೆರೇಸಾ ಮೇ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯೋ ಸೇರಿದಂತೆ ವಿಶ್ವದ 18 ಪ್ರಮುಖ ನಾಯಕರು ಸಹಿ ಹಾಕಿ ಬೆಂಬಲ ಸೂಚಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಿಕೆ ವರದಿ ಮಾಡಿದೆ.

ಜೆಸಿಂದಾ

By

Published : May 16, 2019, 2:10 PM IST

ವಾಷಿಂಗ್ಟನ್: ಕ್ರೈಸ್ಟ್​ ಚರ್ಚ್​ನಲ್ಲಿನ ಉಗ್ರದಾಳಿಯ ಬಳಿಕ ಶಸ್ತ್ರಾಸ್ತ್ರ ಕಾಯ್ದೆಯಲ್ಲಿ ಬದಲಾವಣೆ ಮಾಡಿ ಆದೇಶಿಸಿದ್ದ ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂದಾ ಆರ್ಡರ್ನ್​ ಇದೀಗ ಉಗ್ರರ ದಮನಕ್ಕೆ ಮತ್ತೊಂದು ಹೆಜ್ಜೆಯನ್ನಿರಿಸಿದ್ದಾರೆ.

ಆನ್​ಲೈನ್​ನಲ್ಲಿ ಉಗ್ರ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಪ್ರಧಾನಿ ಜಸಿಂದಾ ಕ್ರೈಸ್ಟ್​ಚರ್ಚ್​ ಕಾಲ್​​ ಎನ್ನುವ ಹೆಸರಿನಲ್ಲಿ ಹೊಸದಾದ ಒಡಂಬಡಿಕೆ ಮಾಡಿದ್ದಾರೆ.

ಪ್ರಸ್ತುತ ಈ ಒಡಂಬಡಿಕೆಗೆ ಬ್ರಿಟಿಷ್ ಪ್ರಧಾನಿ ತೆರೇಸಾ ಮೇ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯೋ ಸೇರಿದಂತೆ ವಿಶ್ವದ 18 ಪ್ರಮುಖ ನಾಯಕರು ಸಹಿ ಹಾಕಿ ಬೆಂಬಲ ಸೂಚಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಿಕೆ ವರದಿ ಮಾಡಿದೆ.

ವಿಶೇಷವೆಂದರೆ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಸಹಿ ಮಾಡಿಲ್ಲ. ಭಯೋತ್ಪಾದನೆ ನಿರ್ಮೂಲನೆಗೆ ನಮ್ಮ ಸಂಪೂರ್ಣ ಸಹಕಾರ ಇರಲಿದೆ. ಆದರೆ ಈ ಒಡಂಬಡಿಕೆಯಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯ ಅಡ್ಡಿಯಾಗಿದೆ ಎಂದು ವೈಟ್​ಹೌಸ್​​ ತನ್ನ ಪ್ರಕಟಣೆಯಲ್ಲಿ ಕಾರಣ ನೀಡಿದೆ. ಅಷ್ಟೇ ಅಲ್ಲ ಭಯೋತ್ಪಾದನೆ ನಿಗ್ರಹದಂತ ಸುದ್ದಿಗಳನ್ನ ಹರಡಲು ಯಾವುದೇ ನಿರ್ಬಂಧ ಇರಬಾರದು. ಉಗ್ರಗಾಮಿ ಚಟುವಟಿಕೆಗಳನ್ನ ಮಟ್ಟ ಹಾಕುವುದೇ ನಮ್ಮ ಉದ್ದೇಶ. ಉಗ್ರರನ್ನ ಮಟ್ಟಹಾಕಲೇಬೇಕು. ಅದಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ ಎಂದು ಅಮೆರಿಕ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಏನಿದು ಕ್ರೈಸ್ಟ್​ಚರ್ಚ್​ ಕಾಲ್​..?

ಬುಧವಾರದಂದು ಪ್ಯಾರಿಸ್​​ನಲ್ಲಿ ನಡೆದ ಜಿ7 ದೇಶಗಳ ಡಿಜಿಟಲ್ ನಾಯಕರ ಸಭೆಯ ಬಳಿಕ ಈ ಕ್ರೈಸ್ಟ್​ಚರ್ಚ್​ ಕಾಲ್​ ಒಡಂಬಡಿಕೆಯನ್ನು ಘೋಷಣೆ ಮಾಡಲಾಗಿತ್ತು.

ಪ್ರಮುಖ ಸಾಮಾಜಿಕ ಜಾಲತಾಣ ಫೇಸ್​ಬುಕ್​​ ಸಹ ಈ ಒಡಂಬಡಿಕೆಗೆ ಸಹಿ ಹಾಕಿದೆ. ಜೊತೆಗೆ ಫೇಸ್​ಬುಕ್​ ಲೈವ್​ನಲ್ಲಿ ಕೆಲ ಮಾರ್ಪಾಡು ಮಾಡುವುದಾಗಿ ಹೇಳಿದೆ.

ಯಾಕೆ ಈ ಒಡಂಬಡಿಕೆ..?

ಕ್ರೈಸ್ಟ್​ಚರ್ಚ್ ದಾಳಿಯನ್ನು ಫೇಸ್​​ಬುಕ್​ನಲ್ಲಿ ನೇರಪ್ರಸಾರ ಮಾಡಲಾಗಿತ್ತು. ಸುಮಾರು 200 ಮಂದಿ ಈ ವೇಳೆ ವೀಕ್ಷಣೆ ಮಾಡಿದ್ದರು. 29 ನಿಮಿಷಗಳ ಕಾಲ ಈ ವಿಡಿಯೋ ಫೇಸ್​ಬುಕ್​ನಲ್ಲಿತ್ತು. ಇದಾದ ಒಂದು ದಿನದ ಒಳಗಾಗಿ ಹದಿನೈದು ಲಕ್ಷಕ್ಕೂ ಅಧಿಕ ಬಾರಿ ಈ ದಾಳಿಯ ವಿಡಿಯೋವನ್ನು ಮತ್ತೊಮ್ಮೆ ಅಪ್​ಲೋಡ್​ ಮಾಡಲು ಪ್ರಯತ್ನಿಸಿದ್ದರು. ಈ ಕಾರಣದಿಂದ ಆನ್​ಲೈನ್​ನಲ್ಲಿ ಉಗ್ರತ್ವಕ್ಕೆ ಪ್ರಚೋದನೆ ದೊರೆಯುತ್ತದೆ ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು.

ABOUT THE AUTHOR

...view details